ಮೈಸೂರು : ಆರ್ ಎಸ್ ಎಸ್ ಆಳ ಮತ್ತು ಅಗಲ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಕೃತಿ ರಚಿಸಿರುವುದು ಕೃತಿಯಲ್ಲ ವಿಕೃತಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಗೆ ಆಳಾಗಿ ಬರೆಯುವವರಿಗೆ ಆರ್ ಎಸ್ ಎಸ್ ನ ಆಳ ಅಗಲ ತಿಳಿದುಕೊಳ್ಳಲು ಸಾಧ್ಯವಿಲ್ಲ. ದೇವನೂರು ಮಹಾದೇವ ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಕುಸುಮ ಬಾಲೆ ನಂತರ ದೇವನೂರು ಮಹಾದೇವ ಅವರಲ್ಲಿ ಒಂದಷ್ಟು ಸೃಜನ ಶೀಲತೆ ಉಳಿದುಕೊಂಡಿದೆ ಎಂದು ಕೊಂಡಿದ್ದೆ. ಆದರೆ ಅವರು ಆರ್ ಎಸ್ ಎಸ್ ಆಳ ಅಗಲ ಪುಸ್ತಕ ಬರೆಯಲು ಹೋಗಿ ಅವರ ಘನತೆಯನ್ನು ಕಳೆದುಕೊಂಡಿದ್ದಾರೆ. ಚಾತುರ್ವರ್ಣ ಪದ್ಧತಿ ಬಗ್ಗೆ ಬರೆಯಲು ಹೋಗಿದ್ದಾರೆ. ಒಂದು ಧರ್ಮ, ಒಬ್ಬ ನಾಯಕ, ಒಂದು ದೇಶವನ್ನು ಆರ್ ಎಸ್ ಎಸ್ ಪ್ರತಿಪ್ರಾದಿಸುತ್ತದೆ ಎಂದು ಬರೆದಿದ್ದಾರೆ. ಆದರೆ ಒಬ್ಬ ವ್ಯಕ್ತಿ, ಒಂದು ಪುಸ್ತಕ, ಒಂದು ದೇಶದಿಂದ, ಇಡೀ ಪ್ರಪಂಚದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ. ಈ ಬಗ್ಗೆ ದೇವನೂರು ಮಹಾದೇವ ಯಾಕೆ ಮಾತನಾಡಲ್ಲ.? ಚಾತುರ್ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲೂ, ಕ್ಯಾತೊಲಿಕ್ ಪ್ರಾಟಸ್ಟೆಂಟ್, ನೀಗ್ರೋ ಮುಂತಾದ ಪಂಥಗಳಿವೆ. ಇಸ್ಲಾಂ ಧರ್ಮದಲ್ಲೂ ಸುನ್ನಿ, ಷಿಯಾ, ಪಠಾಣ್, ಮೊಗಲ್ ಜಾತಿಗಳಿವೆ. ಚಾತುರ್ವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ. ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ, ಬ್ಯಾಂಕ್ ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ. ಇವೆಲ್ಲವನ್ನು ಗಮನಿಸಿದರೆ, ಒಬ್ಬ ಕಾಂಗ್ರೆಸ್ ನ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತನಾಗಿ ಬರೆದು ಸಿದ್ದರಾಮಯ್ಯ ಅವರು ದೇವನೂರು ಮಹದೇವ ಜೊತೆ ಮಾತನಾಡಿ ಅವರ ಹೆಸರನ್ನು ಹಾಕಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.