ಬೆಂಗಳೂರು : ಬಿಜೆಪಿ ಕಾರ್ಯಕರ್ತರು ಹಾಗು ಸಂಘ ಪರಿವಾರದ ಕಾರ್ಯಕರ್ತರು ತಮ್ಮ ಹೆಗಲ ಮೇಲೆ ಕೇಸರಿ ಶಾಲು ಧರಿಸುವುದು ವಾಡಿಕೆ.
ಹಿಂದುತ್ವ ಕಾರ್ಯಸೂಚಿಯಲ್ಲಿ ನಂಬಿಕೆಯಿಟ್ಟವರು ಇದನ್ನು ಹೆಮ್ಮೆಯ ಸಂಗತಿಯಾಗಿ ವಿಜೃಂಭಿಸುತ್ತಾರೆ. ಹಾಗೆಯೇ ಇತರೆ ಪಕ್ಷಗಳಿಂದ ಬಿಜೆಪಿ ಸೇರುವವರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತಾರೆ.
ಹೀಗಿರುವಲ್ಲಿ ಕಾಂಗ್ರೆಸ್ ಶಾಸಕ ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಲಗೈ ಬಂಟ ಬೈರತಿ ಸುರೇಶ್ ಕೇಸರಿ ಶಾಲು ಧರಿಸಿದರೆ ಹೇಗಿರಬೇಡ..?
ಅಂತಹುದೇ ಘಟನೆ ಸೋಮವಾರ ವಿಧಾನಸೌಧದಲ್ಲಿ ನಡೆಯಿತು.
ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲು ಬಂದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರಿಗೆ ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿ ಸ್ವಾಗತಿಸಿ ಅಚ್ಚರಿ ಮೂಡಿಸಿದರು.
ಸುರೇಶ್ ಅವರು ಮತಗಟ್ಟೆಯತ್ತ ತೆರಳುತ್ತಿದ್ದರು. ಆಗ ಮತದಾನ ಮಾಡಿ ವಾಪಸ್ ಬರುತ್ತಿದ್ದ ಬಿಜೆಪಿ ಶಾಸಕರಾದ ರಾಜೂಗೌಡ, ಗೂಳಿಹಟ್ಟಿ ಶೇಖರ್, ಎಂ.ಪಿ. ರೇಣುಕಾಚಾರ್ಯ ಮುಖಾಮುಖಿಯಾದರು.
ತಮ್ಮ ಹೆಗಲ ಮೇಲಿದ್ದ ಕೇಸರಿ ಶಾಲನ್ನು ತೆಗೆದ ರಾಜೂಗೌಡ ಅವರು ಬೈರತಿ ಸುರೇಶ್ ಅವರ ಹೆಗಲಿಗೆ ಹಾಕಿದರು. ತಕ್ಷಣ ಅದನ್ನು ತೆಗೆದ ಸುರೇಶ್ ವಾಪಸ್ ನೀಡಿದರು.
Previous Articleಆಯೂಬ್ ಕೊಲೆ ಆರೋಪಿ ಮತೀನ್ ಸೆರೆ
Next Article ದರ ಹೆಚ್ಚಳದ ಹೊರೆ ಇಲ್ಲ : ಸಿಎಂ ಬೊಮ್ಮಾಯಿ