ನವದೆಹಲಿ: ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ವಿದ್ಯುತ್ ಆಘಾತದಿಂದ ಆನೆಯೊಂದು ಮೃತಪಟ್ಟ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಹಿರಿಯ ನಾಯಕಿ ಹಾಗು ಪರಿಸರವಾದಿ ಮನೇಕಾ ಗಾಂಧಿ ಆಗ್ರಹಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಪ್ರಕರಣ ಮುಚ್ಚಿ ಹಾಕಲು ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಆರೋಪಿಗಳು ಜೆಡಿಎಸ್ ಕಾರ್ಯಕರ್ತರಾಗಿರುವ ಕಾರಣ ಈ ರೀತಿ ಒತ್ತಡ ತಂತ್ರ ಮಾಡಲಾಗುತ್ತಿದೆ ಎಂದು ಮನೇಕಾ ಗಾಂಧಿ ದೂರಿದ್ದಾರೆ.
ಹಾಸನದ ಅರಣ್ಯ ಇಲಾಖೆಯ ಬದಲಾಗಿ ವಿಜೆಲೆನ್ಸ್ ದಳದಿಂದ ಈ ಸಂಬಂಧ ತನಿಖೆ ನಡೆಸುವಂತೆ ಮನೇಕಾ ಗಾಂಧಿ ಮನವಿ ಮಾಡಿದ್ದಾರೆ.
ಆನೆ ಕೊಂದ ಪ್ರಕರಣ: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಎಂಗೆ ಮನೇಕಾ ಗಾಂಧಿ ಪತ್ರ
Previous Articleಭಾರೀ ಸದ್ದಿನೊಂದಿಗೆ ಮಡಿಕೇರಿಯಲ್ಲಿ ಭೂಕುಸಿತ
Next Article ಒಕ್ಕಲಿಗರ ಬೆಂಬಲ ಕೇಳಿದ್ದರಲ್ಲಿ ತಪ್ಪೇನು?