ಗದಗ: ಒಕ್ಕಲಿಗರ ಬೆಂಬಲ ಕೇಳಿದ್ದರಲ್ಲಿ ತಪ್ಪೇನಿದೆ. ನಾನೂ ಕೇಳ್ತೀನಿ..! ಹೀಗೆಂದು ಹೇಳುವ ಮೂಲಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಈ ಕುರಿತು ಗದಗನಲ್ಲಿ ಮಾತನಾಡಿದ ಅವರು, ಯಾವುದೋ ಒಂದು ಸಮಾಜದ ಬೆಂಬಲ ಕೇಳೋದು ತಪ್ಪಾ.?
ನಾನು ಮುಸಲ್ಮಾನ. ಮುಸಲ್ಮಾನರ ಸಪೋರ್ಟ್ ಕೇಳ್ತೇನೆ. ಬೆಂಬಲ ಕೇಳೋದು ಮುಖ್ಯಮಂತ್ರಿ ಆಗೋದಕ್ಕೆ ಅಲ್ಲ ಎಂದರು.
ಡಿಕೆಶಿ ಅವರು ಮುಂದೆ ಅವಕಾಶ ಇದೆ ಬೆಂಬಲಿಸಿ ಅಂತಾ ಕೇಳಿದ್ದಾರಷ್ಟೆ.
ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿಕೆಶಿಯವರ ಫೇಸ್ ತುಂಬಾ ಚೆನ್ನಾಗಿದೆ.
ಹೀಗಾಗಿ ಮಾಧ್ಯಮದವರು ಅವ್ರನ್ನು ತೋರಸುತ್ತಿದ್ದೀರಾ, ತುಂಬಾ ಸಂತೋಶ. ಆದ್ರೆ ಅವ್ರ ಪ್ರೀತಿ ತೋರಿಸಿ. ಅವ್ರ ಜಗಳ ತೋರಸ್ಬೇಡಿ.
ಅವ್ರು ಇಬ್ಬರು ಒಟ್ಟಿಗಿರೋ ಫೋಟೋ ಇದೆ. ಅದನ್ನ ತೋರಿಸಿ ಎಂದು ಮನವಿ ಮಾಡಿದರು.