ಹುಬ್ಬಳ್ಳಿ: ಮನಸುಗಳ ಮದ್ಯೆ ವೈಮಸ್ಸು ಬಂದಾಗ ಅದನ್ನು ಬೆಳೆಸಿದರೆ ಇನ್ನಷ್ಟು ಬೆಳೆಯುತ್ತಾ ಹೋಗುತ್ತದೆ. ಆದರೆ ಶಾಂತಿಯ ಬೀಜ ಬಿತ್ತಿ ಸೌಹಾರ್ಧತೆಯ ಫಸಲು ತೆಗೆಯಲು ಪ್ರಯತ್ನಿಸಿದಾಗ ಮಾತ್ರ ನಾಡಲ್ಲಿ ಕುವೆಂಪು ಕಂಡ ಶಾಂತಿಯ ತೋಟದ ಕನಸು ನನಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಅವರು ಬೆಂಕಿ ಹಚ್ಚುತ್ತಿದ್ದಾರೆ, ಬನ್ನಿ ನಾವು ಮನಸುಗಳ ಮದ್ಯೆ ಶಾಂತಿಯ ದೀಪ ಬೆಳಗಿಸೋಣ ಎನ್ನುವ ಸಂದೇಶಕ್ಕೆ ಹುಬ್ಬಳ್ಳಿಯಲ್ಲಿ ಎರಡು ಧರ್ಮದ ಗುರುಗಳು ಸಾಕ್ಷಿಯಾದರು.
ಹೌದು, ರಾಜ್ಯದಲ್ಲಿ ದಿನೆ ದಿನೆ ಒಂದಿಲ್ಲೊಂದು ಕೋಮು ಗಲಭೆ ಸೃಷ್ಟಿಸುವ ಕೃತ್ಯಗಳು ನಡಿಯುತ್ತಲೇ ಇವೆ. ಅಷ್ಟೇ ಅಲ್ಲದೆ ಹುಬ್ಬಳ್ಳಿ- ಧಾರವಾಡದಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆಯಿಂದ ವಾಣಿಜ್ಯ ನಗರಿ ಜನರು ಭಯಬೀತರಾಗಿದ್ದರು. ಹೀಗಾಗಿ ಹಿಂದೂ-ಮುಸ್ಲಿಂ ಎಲ್ಲರೂ ಒಂದೆ ತಾಯಿಯ ಮಕ್ಕಳಿದ್ದಂತೆ. ನಾವೆಲ್ಲರೂ ಭಾರತಿಯರು ಒಂದಾಗಿ ಬಾಳಬೇಕೆಂದು, ಹಿಂದೂ ಧರ್ಮದ ಸ್ವಾಮೀಜಿಗಳು ಮತ್ತು ಇಸ್ಲಾಂ ಧರ್ಮದ ಮೌಲ್ವಿಗಳು ಹುಬ್ಬಳ್ಳಿಯಲ್ಲಿ ಒಂದಾಗಿ ಕೈ ಕೈ ಹಿಡಿದು, “ಸಾರೇ ಜಹಾಂ ಸೆ ಅಚ್ಛಾ
ಹಿಂದುಸುತಾ ಹಮಾರಾ ಹಮ್ ಬುಲ್ ಬುಲೇ ಹೈ ಇಸ್ ಕೆ, ಯೇ ಗುಲ್ಸೀತಾ ಹಮಾರಾ, ಯೇ ಗುಲ್ಸೀತಾ ಹಮಾರಾ ಹಮಾರಾ..” ಎಂದು ದೇಶಭಕ್ತಿ ಗೀತೆ ಹೇಳುವುದರ ಮೂಲಕ ಭಾವೈಕ್ಯತೆ ಸಾಕ್ಷಿಯಾದರು. ಈ ಮೂಲಕ ಸದ್ಯದ ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಂತಿಯ ವಾತಾವರಣ ನಿರ್ಮಿಸುವುರು ಧರ್ಮ ಗುರುಗಳ ಉದ್ದೇಶವಾಗಿತ್ತು.
ಇವರ ಈ ನಡೆ ಪ್ರಸ್ತುತ ಸನ್ನಿವೇಶಕ್ಕೆ ಬಹಳಷ್ಟು ಅವಶ್ಯಕತೆ ಇದ್ದು, ಈ ಕಾರ್ಯ ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿದೆ.