‘ಕೆಜಿಎಫ್ 2’ ಸಿನಿಮಾ 100 ದಿನಗಳನ್ನು ಪೂರೈಸಿದೆ. ‘ಕೆಜಿಎಫ್ 2’ ಬಾಕ್ಸ್ ಆಫೀಸ್ನಲ್ಲಿ: ಮಾಡಿದ ಮೋಡಿ ಅಷ್ಟಿಷ್ಟಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಈ ಚಿತ್ರಕ್ಕೆ 1250 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಕೇವಲ ಹಿಂದಿ ವರ್ಷನ್ನಿಂದಲೇ 434 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಇದು ಬಾಲಿವುಡ್ ಮಂದಿಯನ್ನೂ ನಿಬ್ಬೆರಗಾಗಿಸಿದ ಸಾಧನೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಸಿನಿಮಾದಿಂದ ಅತಿ ದೊಡ್ಡ ಗೆಲುವು ಸಿಕ್ಕಿದೆ. ಈ ಖುಷಿಯನ್ನು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಸಂಭ್ರಮಿಸಿದೆ. ಇಷ್ಟು ದೊಡ್ಡ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಲಾಗಿದೆ. ‘ಕೆಜಿಎಫ್ 2′ ಚಿತ್ರದ ಪ್ರಮುಖ ತುಣುಕುಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ 100 ದಿನಗಳ ಯಶಸ್ವಿ ಪ್ರಯಾಣವನ್ನು ಸಂಭ್ರಮಿಸಲಾಗಿದೆ.