ನಾಡ ಅಧಿದೇವತೆ ಚಾಮುಂಡಿ ತಾಯಿಯ Death Day ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಚಾಮುಂಡಿ ತಾಯಿಗೆ ಅಪಮಾನ ಮಾಡಲಾಗಿದೆ.
ಜಾಲತಾಣದಲ್ಲಿ ಚಾಮುಂಡಿತಾಯಿ ವರ್ಧಂತಿ ವಿಡಿಯೋಗೆ ಪೋಸ್ಟ್ ಮಾಡಿರುವ ಫೇಸ್ ಬುಕ್ ಪೇಜ್ ಚಾಮುಂಡೇಶ್ವರಿ ಡೆತ್ ಆನಿವರ್ಸರಿ ಅಂತ ಪೋಸ್ಟ್ ಮಾಡಿದ್ದಾರೆ.
ಮೈ ಮೈಸೂರು ಎಂಬ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟವಾಗಿದ್ದು, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ತಾಯಿ ವರ್ಧಂತಿಯನ್ನ ಡೆತ್ ಡೇ ಎಂದು ಪೋಸ್ಟ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಫೇಸ್ ಬುಕ್ ಪೇಜ್ ವಿರುದ್ಧ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆ ಕೇಳಿ ಎಂಬ ಆಕ್ರೋಶ ಕೇಳಿ ಬಂದಿದೆ. ಒಂದು ವೇಳೆ ಬದಲಿಸದಿದ್ದರೆ ದೂರು ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ಸಲ್ಲಿಸುವ ವಾರ್ನಿಂಗ್ ಕೂಡ ನೀಡಲಾಗಿದೆ.