ಸುರತ್ಕಲ್: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಫಾಝಿಲ್ ಮೃತದೇಹವನ್ನು ದಫನಕ್ರಿಯೆಗೆ ಮಸೀದಿಗೆ ತರಲಾಗಿದೆ. ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.
ಆಸ್ಪತ್ರೆಯಿಂದ ಮನೆಗೆ ತಂದ ಮೃತದೇಹವನ್ನು ಅಂತಿಮ ದರ್ಶನದ ಬಳಿಕ ಮಸೀದಿಗೆ ತರಲಾಗಿದೆ. ಮಸೀದಿಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯುತ್ತಿದೆ.
ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದು, ಬಿಗಿಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರುವುದರಿಂದ ಇಂದು ಶುಕ್ರವಾರದ ಮಧ್ಯಾಹ್ನದ ನಮಾಜ್ ಅನ್ನು ತಮ್ಮ ಮನೆಗಳಲ್ಲಿಯೇ ಅಥವ ತಮ್ಮ ಜಮಾಅತ್ ನಲ್ಲಿಯೇ ನಿಷೇಧಾಜ್ಞೆ ಉಲ್ಲಂಘನೆ ಮಾಡದಂತೆ ನಮಾಜ್ ನೆರವೇರಿಬೇಕಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ವಿನಂತಿಸಿದ್ದಾರೆ.