ತುಮಕುರು: ಬಿಜೆಪಿ ಹಾಗು ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಕಿಚ್ಚು ತಣ್ಣಾಗಾಗ್ತಾ ಇಲ್ಲ. ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಹೋರಾಟ ಮುಂದುವರಿದೆ. ಕಲ್ಪತರುನಾಡಿನಲ್ಲಿ ಪ್ರವೀಣ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆ ಹಿಂದೂಗಳನ್ನ ಕೆರಳಿಸುವಂತೆ ಮಾಡಿದೆ. ಇದನ್ನ ಖಂಡಿಸಿ ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾಳಿ ಮಠದ ಶ್ರೀ ರಿಷಿಕುಮಾರಸ್ವಾಮಿಜಿ ಹಿಂದೂ ಭಯೋತ್ಪಾದಕ ಭಾವಚಿತ್ರಗಳನ್ನು ಹರಿದು ಹಾಕಿದರು. ಕಾಲಿನಲ್ಲಿ ತುಳಿದರು. ಇಷ್ಟೇ ಅಲ್ಲದೆ ಬೆಂಕಿ ಇಟ್ಟು ತಮ್ಮ ಸಿಟ್ಟು ಹೊರ ಹಾಕಿದರು. ಬಿಜೆಪಿ ಕಾರ್ಯಕರ್ತರೇ ಹೆಚ್ಚು ಹತ್ಯೆಯಾಗುತಿದ್ದಾರೆ. ನಿಮಗೆ ಧಮ್ ಇದ್ರೆ ನನ್ನ ಹೊಡಿರೋ.. ನನ್ನ ಯಾವತ್ತು ಹೊಡಿತಿರೋ ಅವತ್ತು ನಿಮ್ಮ ಕೊನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಟೌನ್‌ಹಾಲ್ ವೃತ್ತದಲ್ಲಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಎದುರಾಗಿತ್ತು. ಟೌನ್ ಹಾಲ್ ಬಳಿಕ ಡಿಸಿ ಕಚೇರಿಗೆ ತೆರಳಿದ ಪ್ರತಿಭಟನಾ ಕಾರರು ಡಿಸಿ ಕಚೇರಿ ಆವರಣದಲ್ಲಿ ಕೆಲ ಸಮಯ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಕಚೇರಿಗೆ ತೆರಳಿ ಡಿಸಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಜರಂಗ ದಳ ಮಂಜು ಭಾರ್ಗವ್ ಮಾತನಾಡಿ, ಆರೋಪಿಗಳನ್ನು ಗಲ್ಲಿಗೇರಿಸುವಂತೆ ಬಜರಂಗ ದಳ ಸಂಚಾಲಕ ಮಂಜು ಭಾರ್ಗವ ಆಗ್ರಹಿಸಿದರು.
ಬಜರಂಗ ದಳ ಹಾಗು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಹಿನ್ನಲೆ ನೂರಾರು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ತುಮಕೂರು ನಗರ ಅಲ್ಲದೆ ಇಡೀ ಜಿಲ್ಲೆಯಾದ್ಯಂತ ಹಿಂದೂ ಕಾರ್ಯಕರ್ತರು ತಾಲೂಕು ಕಚೇರಿಗಳ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನನ್ನ ಯಾವತ್ತು ಹೊಡಿತಿರೋ ಅವತ್ತು ನಿಮ್ಮ ಕೊನೆ..! – ಕಾಳಿ ಮಠದ ಸ್ವಾಮೀಜಿ
Previous Articleಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಬಂದ್ ಬಿಸಿ
Next Article ಮುಸ್ಲಿಂ ಸಂಘಟನೆಗಳು ಬ್ಯಾನ್ ಆಗಬೇಕು: ಬೆಲ್ಲದ