ಮೈಸೂರು : ಕುದಿಯುತ್ತಿದ್ದ ಬಿಸಿನೀರಿನ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಮೈಸೂರು ತಾಲ್ಲೂಕಿನ ಮಾರ್ಬಳ್ಳಿ ಹುಂಡಿ ಗ್ರಾಮದಲ್ಲಿ ನಡೆದಿದೆ. ಪ್ರಕೃತಿ(2) ಮೃತ ದುರ್ದೈವಿ. ಜುಲೈ 15 ರಂದು ನಿರ್ಮಾಣ ಹಂತದಲ್ಲಿರುವ ಪಕ್ಕದ ಮನೆಯ ಕೂಲಿ ಕಾರ್ಮಿಕರಿಗಾಗಿ ಅಡುಗೆ ಮಾಡಲಾಗುತ್ತಿತ್ತು. ಈ ವೇಳೆ ಸನಿಹದಲ್ಲೇ ಆಟವಾಡುತ್ತಿದ್ದ ಪ್ರಕೃತಿ ಕುದಿಯುತ್ತಿದ್ದ ಬಿಸಿ ನೀರಿನ ಪಾತ್ರೆಯೊಳಗೆ ಬಿದ್ದಿದ್ದಾಳೆ.ಕೂಡಲೇ ಕೆ.ಆರ್.ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ಪ್ರಕೃತಿಯನ್ನ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.