ಬೆಂಗಳೂರು,ಆ.3-ಮಾದಕ ವಸ್ತು ಸರಬರಾಜು ಮಾರಾಟದ ವಿರುದ್ಧ ಭರ್ಜರಿ ಕಾರ್ಯಾಚರಣೆ ಕೈಗೊಂಡು ಇಬ್ಬರು ಕುಖ್ಯಾತ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ 1ಕೋಟಿ 60ಲಕ್ಷ ಮೌಲ್ಯದ ಹ್ಯಾಶಿಸ್ ಆಯಿಲ್ ನ್ನು ವಶಪಡಿಸಿಕೊಳ್ಳುವಲ್ಲಿ ಆಗ್ನೇಯ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಬಂಟ್ವಾಳದ ಆಶ್ರಿಕ್ ಹಾಗೂ ಕೇರಳ ಮೂಲದ ಚೀಪಾಗ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1ಕೋಟಿ 60ಲಕ್ಷ ಮೌಲ್ಯದ 2ಕೆಜಿ 60 ಗ್ರಾಂ ತೂಕದ ಹ್ಯಾಶಿಸ್ ಆಯಿಲ್ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಆಶ್ರಿಕ್ ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನಡೆಸುವ ಸೋಗಿನಲ್ಲಿ ಮತ್ತೊಬ್ಬ ಆರೋಪಿ ಯೂಟ್ಯೂಬ್ ಚಾನಲ್ ನಡೆಸುವ ಸೋಗಿನಲ್ಲಿ ಗ್ರಾಹಕರನ್ನು ಸಂಪರ್ಕಿಸಿ ಹ್ಯಾಶಿಸ್ ಆಯಿಲ್ ಮಾರಾಟ ಮಾಡುತ್ತಿದ್ದರು.
ಬೇಗೂರಿನ ಕೊಪ್ಪ ರಸ್ತೆಯ ರೋಳಾ ಹೈಪರ್ ಮಾರ್ಕೆಟ್ ಬಳಿ ಆರೋಪಿಗಳು ಹ್ಯಾಶಿಸ್ ಆಯಿಲ್ ಮಾರಾಟ ಮಾಡಲು ಯತ್ನಿಸಿದಾಗ ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಬೇಗೂರು ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
30 ಸಾವಿರ ರೂ ಮೌಲ್ಯದ 15 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಮೊಬೈಲ್, 1,200 ರೂ. ನಗದು ಜಪ್ತಿ ಮಾಡಲಾಗಿದೆ.
ಇಬ್ಬರ ವೀಸಾ ಅವಧಿ ಮುಕ್ತಾಯಗೊಂಡು ಒಂದು ವರ್ಷಗಳಾಗಿದ್ದು, ಈ ಹಿಂದೆ ಪೂರ್ವ ವಿಭಾಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನಗರದಲ್ಲಿಯೇ ಅಕ್ರಮವಾಗಿ ವಾಸವಾಗಿದ್ದರು. ಜೀವನ ನಿರ್ವಹಣೆಗಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಓಬೆಜಿ ಜಸ್ಟಿಸ್ ನೈಜೀರಿಯಾದಲ್ಲಿ ಎಂಎಂಡಿ ಮೋಲಾ ಎಂಬ ಹೆಸರಿನಲ್ಲಿ ಪ್ರಖ್ಯಾತ ಯುಟ್ಯೂಬರ್ ಆಗಿದ್ದಾನೆ. ಯುಟ್ಯೂಬ್‌ನಲ್ಲಿ ಎಂಎಂಡಿ ಮೋಲಾ ಹೆಸರಿನಲ್ಲಿ ಹತ್ತಾರು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ. ಸ್ಥಳೀಯ ಸರ್ಕಾರದ ವಿರುದ್ಧ ಕೆಲ ಹೇಳಿಕೆ ದಾಖಲಿಸಿದ್ದಾನೆ ಎಂದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ನೆರೆ ರಾಜ್ಯದಿಂದ ಡ್ರಗ್ಸ್:
ನಗರಕ್ಕೆ ಬಂದಾಗಲೂ ಕೆಲ ವಿಚಾರಗಳ ಕುರಿತು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಇನ್ನು ಈತನ ಸ್ನೇಹಿತ ಸಾಮ್ಯುಯಲ್ ಜತೆ ಸೇರಿಕೊಂಡು ನೆರೆ ರಾಜ್ಯಗಳಲ್ಲಿರುವ ಸ್ನೇಹಿತರ ಮೂಲಕ ಡ್ರಗ್ಸ್ ತರಿಸಿಕೊಂಡು ದಂಧೆ ನಡೆಸುತ್ತಿದ್ದ ಎಂದು ಹೇಳಿದ್ದಾರೆ.
ವಿದೇಶಿ ಕಾಯ್ದೆ ಅಡಿ ಕೇಸ್:
ಕೆ.ಜಿ.ಹಳ್ಳಿ ಠಾಣಾಧಿಕಾರಿ ಸಿ.ಈ.ರೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಎನ್‌ಡಿಪಿಎಸ್ ಮತ್ತು ವಿದೇಶಿ ನಿಯಮ ಉಲ್ಲಂಘನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಬೆಂಗಳೂರಲ್ಲೇ ಇಂದು ಉಗಾಂಡ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದರು.