ತುಮಕೂರು : ಬಟ್ಟೆ ಒಗೆಯಲು ಹೋಗದ ಮಹಿಳೆ ಕೆರೆ ನೀರಿನಲ್ಲಿ ಮುಳುಗಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಭಾನುವಾರ ನಡೆದಿದೆ.
ಬ್ಯಾಡನೂರು ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದೇವಿರಮ್ಮ(34) ಎಂಬಾಕೆ ಕೆರೆ ನೀರಿನಲ್ಲಿ ಮುಳುಗಿದ್ದು, ಸ್ಥಳೀಯರ ನೆರವಿನಿಂದ ಪೊಲೀಸ್ ಹಾಗು ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ. ನೀರಿನಲ್ಲಿ ಮುಳುಗಿರುವ ಮಹಿಳೆಗೆ ಮಾತು ಬಾರದ ಪತಿ ಹಾಗು ಇಬ್ಬರು ಹೆಣ್ಣು ಮಕ್ಕಳು ಇರುವುದಾಗಿ ತಿಳಿದು ಬಂದಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ 22 ವರ್ಷಗಳ ನಂತರ ಬ್ಯಾಡನೊರು ಕೆರೆ ತುಂಬಿದ್ದು, ಕೋಡಿಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರು ಕೆರೆಗೆ ಬಂದು ಬಾಗಿನ ಅರ್ಪಿಸುತ್ತಿದ್ದಾರೆ. ಅಪಾಯದ ಸುಳಿವರಿತು ಈಗಾಗಲೇ ಜಿಲ್ಲಾಡಳಿತ ಜನರು ಕೆರೆ ಕಟ್ಟೆಗಳ ಕಡೆ ಸುಳಿಯದಂತೆ ಎಚ್ಚರಿಕೆ ನೀಡಿದೆ. ಆದಾಗ್ಯೂ ಜನರು ಕೆರೆಕಟ್ಟೆಗಳತ್ತ ಸುಳಿಯುತ್ತಿದ್ದು, ಇಂತಹ ಅವಘಡಗಳು ಸಂಭವಿಸುತ್ತಿವೆ.
ಘಟನೆ ಸ್ಥಳಕ್ಕೆ ಶಾಸಕ ವೆಂಕಟರಮಣಪ್ಪ ಹಾಗೂ ತಹಶಿಲ್ದಾರ್ ವರದರಾಜ್ ಭೇಟಿ ನೀಡಿ ಶೋಧ ಕಾರ್ಯಾಚರಣೆಯನ್ನು ಅವಲೋಕಿಸಿದರು
Previous Articleಎಲ್ರ ಕಾಲೆಳೆಯತ್ತೆ ಕಾಲ: ಚಂದನ್ ಶೆಟ್ಟಿ ಹೊಸ ಹಾಡು ರಿಲೀಸ್
Next Article ಹಲಸಿನಹಣ್ಣಿನಲ್ಲಿದ್ದ ಜವರಾಯ