ಬಿಗ್ ಬಾಸ್ ಒಟಿಟಿ ಶುರುವಾಗಿನ್ನೂ ವಾರ ಕಳೆದಿಲ್ಲ ಆಗಲೇ ಮನೆಯಲ್ಲಿ ಲವ್ವಿ ಡವ್ವಿ ಶುರುವಾಗಿದೆ ಎಂಬ ಗುಸುಗುಸು ಕೇಳಿಬಂದಿದೆ ಈ ಬಾರಿ ಬಿಗ್ ಮನೆಗೆ ’ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಸ್ಫೂರ್ತಿ ಗೌಡ ಎಂಟ್ರಿ ಕೊಟ್ಟಿದ್ದಾರೆ. , ನಟ ರಾಕೇಶ್ ಅಡಿಗ ಮತ್ತು ಸ್ಫೂರ್ತಿ ನಡುವೆ ಕೆಲ ಸಂಭಾಷಣೆ ನಡೆದಿದೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಇಬ್ಬರ ನಡುವೆ ಏನಾದರೂ ನಡೆಯುತ್ತಿದೆಯೇ ಎಂಬ ಕುತೂಹಲ ಮೂಡಿದೆ. ಮೊದಲಿಗೆ ರಾಕೇಶ್ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ‘ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ’ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ನಂತರ ರಾಕೇಶ್ ಅವರು ಸ್ಫೂರ್ತಿ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವುದಾಗಿ ಹೇಳಿದರು. ‘ನಿಮಗೆ ಬಿಗ್ ಬಾಸ್ ಮನೆಯ ಮೇಲೆ ಲವ್ ಆಗುತ್ತದೆ. ಅವರು ನಿಮ್ಮ ಕೈ ನೋಡುತ್ತಿರುತ್ತಾರೆ’ ಎಂದರು ರಾಕೇಶ್. ಅವರು ಫ್ಲರ್ಟ್ ಮಾಡಿದ್ದನ್ನು ನೋಡಿ ಸ್ಫೂರ್ತಿ ನಕ್ಕರು. ಇಬ್ಬರ ನಡುವೆ ಏನೋ ಶುರುವಾಗ್ತಿದೆ ಎಂದು ನೆಟ್ಟಿಗರು ಅಭಿಮಾನಿಗಳು ಮಾತನಾಡುತ್ತಿದ್ದಾರೆ ಬಿಗ್ ಮುಂದಿನ 40 ದಿನಗಳ ಕಾಲ ಯಾವ ರೀತಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.