ಅಮೆರಿಕದ ನ್ಯೂಯಾರ್ಕ್ ನಲ್ಲಿ ಶುಕ್ರವಾರ ನಡೆಯುತ್ತಿದ್ದ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಲೇಖಕ ಸಲ್ಮಾನ್ ರಶ್ದಿ ಕುತ್ತಿಗೆಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಸದ್ಯ ಅವರ ಸ್ಥಿತಿ ಗಂಭೀರ ಆಗಿದ್ದು ವೆಂಟಿಲೇಟರ್ ನಲ್ಲಿದ್ದಾರೆ. ಚಾಕು ಇರಿತದಿಂದ ಅವರು ಒಂದು ಕಣ್ಣು ಕಳೆದುಕೊಳ್ಳಬಹುದು ಎನ್ನಲಾಗಿದೆ. ಅಲ್ಲದೆ ಅವರ ತೋಳಿನ ನರ ತುಂಡಾಗಿ ಯಕೃತ್ಣಿಗೂ ತೀವ್ರ ಹಾನಿಯಾಗಿದೆ. ರಶ್ದಿ ಮೇಲೆ ದಾಳಾಳಿ ನಡೆಸಿದವನನ್ನು ನ್ಯೂಜೆರ್ಸಿ ಮೂಲದ ಹದಿ ಮುತರ್ ಎಂದು ಗುರುತಿಸಲಾಗಿದೆ. ದಾಳಿಯ ಉದ್ದೇಶ ಇನ್ನಷ್ಟೇ ತಿಳಿಯಬೇಕಿದೆ 75 ವರ್ಷ ವಯಸ್ಸಿನ ಲೇಖಕನ ಬರಹಗಳು ಈ ಹಿಂದೆ ಹಲವಾರು ರೀತಿಯ ಬೆದರಿಕೆಗಳಿಗೆ ಕಾರಣವಾಗಿತ್ತು.
Previous Article10 ಅಡಿ ಆಳಕ್ಕೆ ಕುಸಿದ ರಸ್ತೆ..!!
Next Article ಮನೆ ಬಾಗಿಲಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ಅಟ್ಯಾಕ್