ವಿಜಯಪುರ. ಆ.16- ಹಿಂದಿ ಚಿತ್ರರಂಗದಲ್ಲಿ ತಮ್ಮ ಭಾವಪೂರ್ಣ ಅಭಿನಯ, ಮ್ಯಾನರಿಸಂಗಳಿಗಾಗಿ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ಶಾರೂಕ್, ಸಲ್ಮಾನ್, ಸೈಫ್ ಅಲಿ ಖಾನ್, ಅಮೀರ್ ಖಾನ್ ಪಾಕಿಸ್ತಾನದ ಎಜೆಂಟರಂತೆ, ಇವರ ಸಿನಿಮಾಗಳನ್ನು ಯಾರೂ ನೋಡಬಾರದಂತೆ.
ಹೀಗಂತಾ ಹೇಳಿದವರು ಯಾರು ಗೊತ್ತಾ.? ಕೇಂದ್ರದ ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್.
ಬಾಲಿವುಡ್ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್, ಸೈಫ ಅಲಿ ಖಾನ್, ಅಮೀರ್ ಖಾನ್ ಇವರೆಲ್ಲ ಪಾಕಿಸ್ತಾನದ ಎಜೆಂಟರಾಗಿ ಕೆಲಸ ಮಾಡುತ್ತಾರೆ ಅಂತಾ ಯತ್ನಾಳ್ ಆರೋಪಿಸಿದ್ದಾರೆ. ಲಾಲ್‌ಸಿಂಗ್ ಚಡ್ಡಾ ಚಿತ್ರದ ವಿವಾದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ನಟ ಅಮೀರ್ ಖಾನ್ ನಾಗರಹಾವಿಗೆ ಹಾಲು ಹಾಕುವುದು ಅವಮಾನ ಎನ್ನುತ್ತಾನೆ. ಆದರೆ, ಬಕ್ರೀದ್ ದಿನ ಕುರಿ ಕೊಯ್ಯುವುದು ಮೂಢನಂಬಿಕೆ ಎಂದೇಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದರು.
ನಟ ಅಮೀರಖಾನ್ ಚಿತ್ರಗಳು ಹಿಂದೂ ಧರ್ಮದ ವಿರುದ್ಧವಾಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಿರುತ್ತವೆ. ಅಮೀರಖಾನ್ ಹಿಂದೂ ದೇವತೆಗಳನ್ನು ಅಸಹ್ಯಕರವಾಗಿ ಚಿತ್ರಿಸುತ್ತಾನೆ ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕು ಎಂದು ಆಗ್ರಹಿಸಿದರು.