‘ಕಿಸ್’ ಚಿತ್ರದ ನಾಯಕ ವಿರಾಟ್ ‘ಕಡಲೂರ ಕಣ್ಮಣಿ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಹಾಡುಗಳು ಪ್ರದರ್ಶನವಾಯಿತು. ಚಿತ್ರದ ಟೀಸರ್ ಅಪಾರ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಎಲ್ಲರ ಮೆಚ್ಚುಗೆ ದೊರಕಿದೆ. ಆರ್.ಪಿ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು ನಿರ್ದೇಶನದ ಹೊಸ ಚಿತ್ರ ಇದಾಗಿದ್ದು ಶಿರಸಿ ಮೂಲದ ಅರ್ಜುನ್ ನಗರ್ಕರ್, ನಿಶಾ ಯಾಲಿನಿ ನಾಯಕ, ನಾಯಕಿಯಾಗಿದ್ದಾರೆ. ನಿರ್ಮಾಪಕರಾದ ವಿನೋದ್ ರಾಮ್, ಶೈಲೇಶ್ ಆರ್ ಪೂಜಾರಿ ಹಾಗು ಬಸವರಾಜ ಗಜ್ಜಿ ಚಿತ್ರದ ನಿರ್ಮಾಣ ಮಾಡಿದ್ದಾರೆ.
Previous Articleಅಮೀರ್ ಖಾನ್, ಸಲ್ಮಾನ್ ಖಾನ್ ಪಾಕಿಸ್ತಾನದ ಏಜೆಂಟರಾ…?
Next Article ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡ..!