ಗುರುಗ್ರಾಮ(ಚಂಡೀಗಢ)ಆ.21– ಸ್ನೇಹಿತನ ಪ್ರಾಣ ಉಳಿಸಲು ಕೊಳಕ್ಕೆ ಹಾರಿದ 16 ವರ್ಷದ ಬಾಲಕ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಬಳಿ ನಡೆದಿದೆ.
ಮೃತ ಬಾಲಕ ಸೋನು ಎಂದು ಗುರುತಿಸಲಾಗಿದ್ದು, ಸೋನು ಮತ್ತು ಇತರ ನಾಲ್ವರು ಹುಡುಗರಾದ ಯಶ್, ಅಂಕಿತ್, ವಂಶ್ ಮತ್ತು ಆತನ ಸಹೋದರ ನಿನ್ನೆ ಮಧ್ಯಾಹ್ನದ ಸ್ನಾನ ಮಾಡಲು ಸಮಸ್‍ಪುರ ಗ್ರಾಮದ ಕೊಳಕ್ಕೆ ಹೋಗಿದ್ದರು.
ನಾಲ್ವರಲ್ಲಿ ಬಬ್ಬ ಬಾಲಕ ಮುಳುಗುತ್ತಿರುವುದನ್ನು ನೋಡಿದ ಸೋನು ಆತನನ್ನು ರಕ್ಷಿಸಲು ಪ್ರಯತ್ನಿಸಿ, ತಾನೇ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ ಸೋನುವನ್ನು ರಕ್ಷಿಸಲು ಪ್ರಯತ್ನಿಸಿದ ಸ್ನೇಹಿತರು ಮತ್ತು ಇತರ ಮೂವರು ಬಾಲಕರನ್ನು ರಕ್ಷಿಸಲಾಗಿದೆ.
ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸೋನುವನ್ನು ನೀರಿನಿಂದ ಹೊರತೆಗೆದು, ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸೋನು ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
Previous Articleಹಿಂದೂ ವಿರೋಧಿ ಹೇಳಿಕೆಯಿಂದ ಬೇಸತ್ತು ಮೊಟ್ಟೆ ಎಸೆದೆ…!!
Next Article ಚಿರತೆ ಉಗುರು, ಹಲ್ಲು ಕಿತ್ತರು..!!