ಬೆಂಗಳೂರು,ಆ.23-ಕಳೆದ ಆ.14 ರಂದು ನಡೆದ ದೇಶದ್ರೋಹ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಂಪಿಗೆಹಳ್ಳಿ ಪೊಲೀಸರು ಈ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತಮಾಷೆಗಾಗಿ ಸವಾಲು ಹಾಕಿದ್ದರಿಂದ ಪಾಕಿಸ್ತಾನ್ ಬಾವುಟ ಹಾಕಿದ್ದೆವು ಎಂದು ಬಂಧಿತ ಟೆಕ್ಕಿಗಳು ಬಾಯ್ಬಿಟ್ಟಿದ್ದಾರೆ.
ಕಳೆದ ಆಗಸ್ಟ್ 14ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕ್ಲಬ್ ಹೌಸ್ನಲ್ಲಿ ಗ್ರೂಪ್ಗಳನ್ನು ಮಾಡಿಕೊಂಡು ಪಾಕ್ ಪರವಾಗಿ ಮಾತನಾಡಿದ್ದರು.
ಇದೇ ವೇಳೆ ಭಾರತಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಲ್ಲದೆ ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಹಾಕಿ ಪಾಕ್ ಪರವಾಗಿ ನಡೆದುಕೊಂಡಿದ್ದರು, ಅಷ್ಟೇ ಅಲ್ಲದೆ ಆ ಆ್ಯಪ್ನಲ್ಲಿದ್ದ ಹತ್ತು ಮಂದಿ ತಮ್ಮ ಡಿಪಿಗಳಲ್ಲಿ ಪಾಕಿಸ್ತಾನದ ಧ್ವಜ ಹಾಕಿದ್ದರು ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖೆ ನಡೆಸಿ ಮೊದಲಿಗೆ ಸೌರಭ್ ಹಾಗು ರಾಹುಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಮಾಷೆ ಮಾಡಲು ಹೋಗಿ ಈ ರೀತಿಯ ಘಟನೆ ನಡೆದಿದೆ ಎಂದು ಬಾಯ್ಬಿಟ್ಟಿದ್ದಾರೆ.
ಸೌರಭ್ ಹಾಗು ರಾಹುಲ್ ಇಬ್ಬರೂ ಟೆಕ್ಕಿಗಳಾಗಿ ಕೆಲಸ ಮಾಡಿಕೊಂಡಿದ್ದರು. ಕ್ಲಬ್ ಹೌಸ್ ಗ್ರೂಪ್ನಲ್ಲಿ ಮಾತನಾಡುವ ವೇಳೆ ನಿಮಗೆ ತಾಕತ್ ಇದ್ರೆ ಪಾಕ್ ಪರವಾಗಿ ಘೋಷಣೆ ಮಾಡಿ ಎಂದು ಗ್ರೂಪ್ನಲ್ಲಿ ಕೆಲವರು ಸವಾಲೆಸೆದಿದ್ದರು. ಆಗ ಸೌರಭ್ ಮತ್ತು ಟೀಂ ನಮ್ಮ ತಾಕತ್ ಬಗ್ಗೆ ಮಾತಾಡ್ತೀರಾ ಎಂದು ಅವರು ಹೇಳಿದ ಹಾಗೆ ಮಾಡಿದ್ದರು.
ಉಳಿದ ಯುವಕರಿಗಾಗಿ ಸಂಪಿಗೆಹಳ್ಳಿ ಪೊಲೀಸರು ಬಲೆ ಬೀಸಿದ್ದು, ಸೌರಭ್ ಹಾಗು ರಾಹುಲ್ನನ್ನ ಪೊಲೀಸರು ವಿಚಾರಣೆ ನಡೆಸಿ ಕಳಿಸಿದ್ದಾರೆ. ಉಳಿದ ಆರೋಪಿಗಳು ಸಿಕ್ಕ ಬಳಿಕ ಮತ್ತೆ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ.
Previous Articleಚಿರತೆ ಪತ್ತೆಗೆ ಡ್ರೋನ್ ಬಳಕೆ
Next Article ಅನಧಿಕೃತ ಮೈಕ್ ಗಳನ್ನ ತೆರವುಗೊಳಿಸುವಂತೆ ಒತ್ತಾಯ