ಸೌತ್‌ನ ಸ್ಟಾರ್ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಹೀರೋಗಳಿಗೆ ಬಗೆಬಗೆ ಸ್ಟೆಪ್ಸ್ ಹಾಕಿಸಿ ಖ್ಯಾತಿ ಗಿಟ್ಟಿಸಿಕೊಂಡವರು. ಇದೀಗ ಅವರೇ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. , ‘ಯಥಾ ರಾಜ ತಥಾ ಪ್ರಜಾ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ‘ಯಥಾ ರಾಜ ತಥಾ ಪ್ರಜಾ’ ಸಿನಿಮಾದಲ್ಲಿ ಜಾನಿ ಮಾಸ್ಟರ್ ಜತೆಗೆ “ಸಿನಿಮಾ ಬಂಡಿ” ಮೂಲಕ ಗುರುತಿಸಿಕೊಂಡ ವಿಕಾಸ್ ಸಹ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಶ್ರಷ್ಟಿ ವರ್ಮಾ ನಾಯಕಿಯಾಗಿದ್ದಾರೆ. ಶ್ರೀನಿವಾಸ ವಿಟ್ಟಲ ಈ ನಿರ್ದೇಶಿಸಲಿರುವ ಈ ಚಿತ್ರವನ್ನು ಹರೇಶ್ ಪಟೇಲ್ ಜತೆ ಸೇರಿ ನಿರ್ದೇಶಕರೂ ಬಂಡವಾಳ ಹೂಡುತ್ತಿದ್ದಾರೆ. ಓಂ ಮೂವಿ ಕ್ರಿಯೇಶನ್ಸ್ ಮತ್ತು ಶ್ರೀ ಕೃಷ್ಣ ಮೂವಿ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
‘ಯಥಾ ರಾಜ ತಥಾ ಪ್ರಜಾ’ ಎಂದ-ನೃತ್ಯ ನಿರ್ದೇಶಕ ಜಾನಿ ಮಾಸ್ಟರ್
Previous Articleಮನೆಯವರು ಮಾತು ಕೇಳಲಿಲ್ಲ ಎಂದು ಹೀಗಾ ಮಾಡೋದು..?
Next Article ಕಾಮಗಾರಿ ಕಮೀಷನ್ ಶೇ.40 ಅಲ್ಲ ಈಗ ಶೇ.50