ಬೆಂಗಳೂರು,ಆ.24- ಡೇಟಿಂಗ್ ಆ್ಯಪ್ ಹುಚ್ಚಿಗೆ ಬಿದ್ದ ಬಿಲ್ಡರ್ ಒಬ್ಬನನ್ನು ಬ್ಲಾಕ್ ಮೇಲ್ ಮಾಡಿ ಮಹಿಳೆಯೊಬ್ಬಳು ಲಕ್ಷಾಂತರ ಹಣ ಸುಲಿಗೆ ಮಾಡಿರುವ ಕೃತ್ಯ ಜಯನಗರದಲ್ಲಿ ಬೆಳಕಿಗೆ ಬಂದಿದೆ.
ಡೇಟಿಂಗ್ ಆ್ಯಪ್ ಹುಚ್ಚಿಗೆ ಬಿದ್ದ ಬಿಲ್ಡರ್ವೊಬ್ಬರನ್ನು ಬೆದರಿಸಿ ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ ಹಂತ ಹಂತವಾಗಿ ಏಳು ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. 2019 ರಲ್ಲಿ ಬಿಲ್ಡರ್ಗೆ ಒಕೆಸಿ ಡೇಟಿಂಗ್ ಆ್ಯಪ್ನಲ್ಲಿ ಬೊಮ್ಮಿಶೆಟ್ಟಿ ತ್ರಿಪುರಾ ಪರಿಚಯವಾಗಿದ್ದು, ನಂತರ ಇಬ್ಬರು ವಾಟ್ಸ್ಆ್ಯಪ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
ಬಳಿಕ ಇಬ್ಬರು ಶಿರಡಿ, ತಿರುಪತಿ ಎಂದು ಸುತ್ತಾಡಿದ್ದು ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಇದನ್ನು ಲಾಭವಾಗಿ ಮಾಡಿಕೊಂಡ ವಂಚಕಿ ಅಸಲಿ ಆಟ ಶುರು ಮಾಡಿದ್ದಾಳೆ.
ಮರ್ಯಾದೆಗೆ ಅಂಜಿ ಬಿಲ್ಡರ್ ಸಹ ಆಕೆ ಕೇಳಿದಾಗಲೆಲ್ಲಾ ಹಣ ನೀಡುತ್ತಲೇ ಬಂದಿದ್ದು ಜೊತೆಗೆ ತನಗೊಂದು ಹೊಸ ಫ್ಲಾಟ್ ಹಾಗು ಮತ್ತಷ್ಟು ಹಣ ಕೊಡಬೇಕೆಂದು ಮತ್ತೆ ಬೇಡಿಕೆ ಇಟ್ಟಾಗ ಬೇಸತ್ತ ಬಿಲ್ಡರ್ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮಿಬ್ಬರ ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಇದನ್ನ ನಿಮ್ಮ ಮನೆಯವರಿಗೆ ತೋರಿಸಿ ಫೇಸ್ಬುಕ್ನಲ್ಲಿ ಹಾಕುವೆ ಎಂದು ಬೆದರಿಕೆ ಹಾಕಿ, ಹಂತ ಹಂತವಾಗಿ 7 ಲಕ್ಷ ಸುಲಿಗೆ ಮಾಡಿದ್ದಾಳೆ. ಮಹಿಳೆಗೆ ಈಗಾಗಲೇ ವಿವಾಹವಾಗಿ ವಿಚ್ಚೇದನವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೀಗೆ ಹಣ ಸುಲಿಗೆ ಮಾಡಿದ್ದಾಳೆ ಎನ್ನಲಾಗಿದ್ದು ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಕಂದಕದಲ್ಲಿ ಬಿದ್ದಿದ್ದ ಪರ್ವತಾರೋಹಿ 2 ತಿಂಗಳ ಬಳಿಕ ಪತ್ತೆ!
Next Article ಜಾಕ್ವೆಲಿನ್ ಕಷ್ಟಪಟ್ಟ ಹಣವಂತೆ..!