ಬೆಂಗಳೂರು 25: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಅಜ್ರೆ, ಕೊಡ್ಲಾಡಿ, ಅಂಪಾರು, ಕರ್ಕುಂಜೆ, ಸಿದ್ದಾಪುರ ಹಾಗೂ ಇತರೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಇಂದು ರಾಜ್ಯ ಸಚಿವ ಸಂಪುಟ ತನ್ನ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಸಿದ್ದಾಪುರ, ಅಂಪಾರು, ಅಜ್ರಿ ಮತ್ತು ಕೊಡ್ಲಾಡಿ ಗ್ರಾಮಗಳ ಪ್ರದೇಶವು ವಾರಾಹಿ ಬಲದಂಡೆ ನಾಲೆಯ ಬಲ ಭಾಗದಲ್ಲಿ ಬರುವುದರಿಂದ ನೀಋಆವರಿ ಸೌಲಭ್ಯದಿಂದ ವಂಚಿತವಾಗಿರುತ್ತದೆ. ಈ ಪ್ರದೇಶದ ಬಹುಭಾಗವು ಕೃಷಿ ಭೂಮಿಯಾಗಿದ್ದು, ನೀರಾವರಿಯು ಅಗತ್ಯವಾಗಿರುವುದರಿಂದ, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನೀರಾವರಿ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸುತ್ತಿರುತ್ತಾರೆ. ಆದುದರಿಂದ ಸದರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುತ್ತದೆ.
Previous Articleಅಕ್ರಮ ಗಣಿ ಕುಣಿಕೆಯಲ್ಲಿ ಜಾರ್ಖಂಡ್ CM
Next Article ವಿಜಯಪುರಕ್ಕೆ ಬಹು ಗ್ರಾಮ ಕುಡಿಯುವ ನೀರು