ಬೆಂಗಳೂರು, ಸೆ.4-ತನ್ನ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಾಗಡಿ ತಾಲೂಕಿನ ಹೊಸ ಪಾಳ್ಯದಲ್ಲಿ ನಡೆದಿದೆ.
ಮಾಗಡಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸ ಪಾಳ್ಯ ಗ್ರಾಮದ ಲೋಕೇಶ್ ಅವರ ಪತ್ನಿ ರೂಪಾ (38) ಇವರ ಮಕ್ಕಳಾದ 6 ವರ್ಷದ ಹರ್ಷಿತ ಮತ್ತು 4 ವರ್ಷದ ಸ್ಪೂರ್ತಿ ಆತ್ಮಹತ್ಯೆ ಶರಣಾದವರು.
ಗ್ರಾಮದ ಹೊರವಲಯದ ಜಮೀನಿನ ಬಳಿ ಮೊದಲಿಗೆ ರೂಪ ತಮ್ಮ ಮಕ್ಕಳಿಬ್ಬರಿಗೆ ವಿಷ ಕುಡಿಸಿ ನಂತರ ತಾವೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಲೋಕೇಶ್ ಅವರಾಗಲಿ, ಸ್ಥಳೀಯರಾಗಲಿ ಬಾಯಿ ಬಿಡುತ್ತಿಲ್ಲ. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Previous Articleಗುಂಡಿನ ಗಮ್ಮತ್ತಿನಲ್ಲಿ ಇನ್ಸ್ಪೆಕ್ಟರ್ ದಂಪತಿ ಮಾಡಿದ್ದೇನು ಗೊತ್ತಾ
Next Article ಸೋನಾಲಿ ಪೋಗಟ್ ಸಾವಿನ ದಾಖಲೆಗಳು ಪತ್ತೆ