ಬೆಂಗಳೂರು – PayCM ಅಭಿಯಾನ ನಡೆಸುವ ಮೂಲಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಕಾಂಗ್ರೆಸ್ ಷಡ್ಯಂತ್ರ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ವ್ಯವಸ್ಥಿತ ಪಿತೂರಿ ಈ ಮೂಲಕ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತ್ರ ನಡೆಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ’ ಎಂದು ಹೇಳಿದರು.
ಆಧಾರರಹಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಮಾಡುವುದು ಎಲ್ಲರಿಗೂ ಬರುತ್ತದೆ. ಇದು ಸುಳ್ಳು ಎಂದು ಜನರಿಗೆ ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ಆದರೆ, ರಾಜ್ಯದ ಹೆಸರು ಕೆಡಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು ಎಂದು ತಿಳಿಸಿದರು.
ಭಿಕ್ಷೆ ಬೇಡಬಹುದಲ್ಲವೇ:
ಈ ನಡುವೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ಸಿಗರೇ, ಭಾರತ್ ಜೋಡೋ ಯಾತ್ರೆಗಾಗಿ ರಾಹುಲ್ ಗಾಂಧಿ ಅವರ ಫೋಟೊ ಬಳಸಿ ಭಿಕ್ಷೆ ಬೇಡಬಹುದಲ್ಲವೇ’ ಎಂದು ಕಿಡಿಕಾರಿದೆ.
ಭಾರತ್ ಜೋಡೋ ಯಾತ್ರೆಗಾಗಿ ಕೇರಳದ ಕೊಲ್ಲಂನಲ್ಲಿ ತರಕಾರಿ Businessಿಯೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ ಬಲವಂತದಿಂದ ದೇಣಿಗೆ ಸಂಗ್ರಹಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಕಾಂಗ್ರೆಸ್ಸಿಗರೇ, ಯಾತ್ರೆಗಾಗಿ ರಾಹುಲ್ ಗಾಂಧಿ ಅವರ ಫೋಟೊ ಹಾಕಿ, ಕ್ಯೂಆರ್ ಕೋಡ್ ಸೃಷ್ಟಿಸಿ ಭಿಕ್ಷೆ ಬೇಡಬಹುದಲ್ಲವೇ’ ಎಂದು ಪ್ರಶ್ನಿಸಿದೆ.
Previous Articleಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ
Next Article SIIMA ಪಾರ್ಟಿ ವೇಳೆ ಆಗಿದ್ದೇನು ಗೊತ್ತಾ?