Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಖರ್ಗೆ ಅಧ್ಯಕ್ಷರಾದರು..ಮುಂದೇನು..?
    ರಾಜಕೀಯ

    ಖರ್ಗೆ ಅಧ್ಯಕ್ಷರಾದರು..ಮುಂದೇನು..?

    vartha chakraBy vartha chakraOctober 20, 2022Updated:October 20, 2022No Comments4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕರ್ನಾಟಕದ ರಾಜಕಾರಣದಲ್ಲಿ ಕಳೆದ ಮೂರು ದಶಕಗಳಿಂದ ಪ್ರಮುಖವಾಗಿ ಕೇಳಿಬರುತ್ತಿರುವ ನಾಯಕರ ಹೆಸರುಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಅವರದ್ದು ಅತ್ಯಂತ ಪ್ರಮುಖವಾದದ್ದು, ಖರ್ಗೆ ಅವರಿಗಿದ್ದ ಹಿರಿತನ,ರಾಜಕೀಯ ಅನುಭವ,ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯ, ಶಿಸ್ತನ್ನು ಪರಿಗಣಿಸುವುದಾದರೆ ಖರ್ಗೆ ಯಾವತ್ತೋ ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು.
    ಇದೇ ಅರ್ಹತೆಯ ಕಾರಣಕ್ಕೆ ಹಲವು ಬಾರಿ ಮುಖ್ಯಮಂತ್ರಿ ಗಾದಿಯ ಸಮೀಪಕ್ಕೆ ಬಂದರೂ ಹೊರ ನಿಲ್ಲಬೇಕಾಯಿತು.ಅಷ್ಟೇ ಅಲ್ಲ ರಾಜ್ಯ ರಾಜಕಾರಣದಿಂದಲೂ ಹೊರ ಹೋಗಬೇಕಾಯಿತು ಇಂತಹ ಖರ್ಗೆ ಅವರು ಇದೀಗ ಅಖಿಲ ಭಾರತ ಕಾಂಗ್ರೆಸ್ ನ ಸಾರಥಿ,‌ಮಹಾರಥಿ.
    ನೆಹರೂ–ಗಾಂಧಿ ಕುಟುಂಬದ ಹೊರಗಿನವರೊಬ್ಬರು 24 ವರ್ಷಗಳ ಬಳಿಕ ಈ ಹುದ್ದೆಗೆ ಏರಿದ್ದಾರೆ. ಪಕ್ಷದಲ್ಲಿ ಜಗಜೀವನ ರಾಂ ಅವರ ನಂತರ ಮೊದಲ ಬಾರಿಗೆ ದಲಿತ ನಾಯಕ ರೊಬ್ಬರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
    ಅದೇನೇ ಇರಲಿ, ತಮ್ಮ ಪಕ್ಷ ನಿಷ್ಠೆ, ತತ್ವ,ಸಿದ್ದಾಂತ ಮತ್ತು ಶಿಸ್ತನ್ನು ಎಂದಿಗೂ ಬಿಟ್ಟು ಕೊಡದ ನಾಯಕ,ಪಕ್ಷ ಸಂಘಟನೆ ವಿಷಯದಲ್ಲಿ ಪ್ರತಿ ಪಕ್ಷ ನಾಯಕರಾಗಿ, ಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ನೀಡಿದ ಕೊಡುಗೆ ಗಣನೀಯ ಕೊಡುಗೆ ನೀಡಿದರೆ,
    ರಾಷ್ಟ್ರಮಟ್ಟದಲ್ಲಿ ಬಸವಳಿದ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಹಲವು ಬಾರಿ ಮರು ಜೀವ ನೀಡಿದೆ ಇದಕ್ಕೆ ಪ್ರತಿಫಲವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿಸುವ ಮೂಲಕ ಕಾಂಗ್ರೆಸ್ ಋಣ ತೀರಿಸಿಕೊಂಡಿದೆ ಎನ್ನಬಹುದು.
    ನುರಿತ ರಾಜಕಾರಣಿ. ಪಕ್ಷ ಮತ್ತು ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಕಂಡವರು. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದರೂ ಯಾವತ್ತೂ ಅವರು ಹೆಸರಿಗೆ ಕಳಂಕ ಅಂಟಿಸಿಕೊಂಡವರಲ್ಲ. ದಲಿತ ಅಸ್ಮಿತೆಯೂ ಇದೆ. ಸಮಚಿತ್ತ , ಸಮಯೋಚಿತ ಸೂಕ್ಷ್ಮ ಸ್ವಭಾವ ಹೊಂದಿರುವ ಇಲ್ಲಿಯವರೆಗೆ ದುಡುಕಿ ಇಲ್ಲವೇ ಆತುರವೆನಿಸುವ ತೀರ್ಮಾನ ಕೈಗೊಂಡಿಲ್ಲ ಇದೇ ಅವರ ಹೆಗ್ಗಳಿಕೆ.
    ಆದರೆ ಈಗ ಅವರ ಎದುರಿಸಬೇಕಿರುವ ಸವಾಲುಗಳು ಬೆಟ್ಟದಷ್ಟಿವೆ.ಅದನ್ನು ಹೇಗೆ ನಿಭಾಯಿಸಬಲ್ಲರು ಎನ್ನುವುದು ಕುತೂಹಲಕರ
    ಪಕ್ಷದ ಸತತ ಸೋಲುಗಳು ಹಲವರನ್ನು ಪಕ್ಷ ತೊರೆಯುವಂತೆ ಮಾಡಿದೆ. ಮಾತು,ನಡೆ,ನುಡಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಕ್ಷ ತೊರೆಯುವರ ಸಂಖ್ಯೆ ಹೆಚ್ಚುತ್ತಿದೆ.ಇಂತಹ ಸಮಯದಲ್ಲಿ
    ಒಂದರಂತೆ ಸೋಲು ಕಾಣುತ್ತಿರುವ, ನಾಯಕರನ್ನು ಕಳೆದುಕೊಂಡಿರುವ ಹಾಗೂ ನೀತಿ ಮತ್ತು ಕಾರ್ಯತಂತ್ರಗಳ ವಿಚಾರದಲ್ಲಿ ಎಡವುತ್ತಿರುವ ಪಕ್ಷಕ್ಕೆ ಅವರು ಶಕ್ತಿ ತುಂಬಬೇಕಿದೆ. ಸದ್ಯಕ್ಕೆ ಇವರ ಮುಂದೆ ಹಿಮಾಚಲ ಪ್ತದೇಶ,ಗುಜರಾತ್ ಚುನಾವಣೆಯಿದೆ. ನಂತರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಯಿದೆ.
    ಅದರಲ್ಲೂ ತಮ್ಮ ತವರು ರಾಜ್ಯ ಕರ್ನಾಟಕ ಅವರಿಗೆ ಅತ್ಯಂತ ಪ್ರತಿಷ್ಠೆಯ ಹಾಗೂ ಮಹತ್ವದ ಚುನಾವಣೆಯಾಗಿದೆ. ಹಾಗೆ ನೋಡಿದರೆ ಇದಕ್ಕೂ ಮುನ್ನ ಹಲವು ಬಾರಿ ಮುಖ್ಯಮಂತ್ರಿ ಹುದ್ದೆಯ ಸಮೀಪಕ್ಕೆ ಬಂದವರು ಈ ಬಾರಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಜಗಳದಲ್ಲಿ ಖರ್ಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ರಾಜಕೀಯ ಪರಿಣಿತರು ಹೇಳುತ್ತಿದ್ದರು.ಈಗ ಅದು ಮುಗಿದ ಅಧ್ಯಾಯ. ಖರ್ಗೆ ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯೊಬ್ಬರು ದೂರಾದರೆಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಖುಷಿ ಪಡಬಹುದು.ಆದರೆ, ಈ ಖುಷಿ ಮುಂದೆ ಯಾವ ಸ್ವರೂಪ ಪಡೆಯಬಹುದು ಎನ್ನುವುದನ್ನು ಊಹಿಸುವದು ಕಷ್ಟ.
    ಯಾಕೆಂದರೆ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಪಕ್ಷ ನಿಷ್ಠ.ಈ ವಿಷಯದಲ್ಲಿ ಅವರು ಸದಾ ನಿಷ್ಠರಿಗೆ ಮನ್ನಣೆ ಕೊಡುತ್ತಾ ಬಂದಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಮೂಲ ಮತ್ತು ವಲಸಿಗ ಎಂಬ ವಿಷಯ ಮುನ್ನೆಲೆಗೆ ಬಂದಾಗ ಸದಾ ಮೂಲ ಕಾಂಗ್ರೆಸ್ಸಿಗರ ಪರ ನಿಂತ ಇದಕ್ಕಾಗಿ ಹಲವು ಬಾರಿ ಮುಖಭಂಗ ಅನುಭವಿಸಿದ್ದಾರೆ.
    ಹಲವರ ಪ್ರಯತ್ನದ ಬಳಿಕ ಕಾಂಗ್ರೆಸ್ ಗೆ ಬಂದ ಸಿದ್ದರಾಮಯ್ಯ ಕ್ರಮೇಣ ಪಕ್ಷದಲ್ಲಿ ತಮ್ಮದೇ ಹಿಡಿತ ಸಾಧಿಸಿದರು. ಇದರ ಪರಿಣಾಮವಾಗಿ ನಷ್ಟಕ್ಕೊಳಗಾದವರು ಖರ್ಗೆ.
    ಮುಖ್ಯಮಂತ್ರಿ ಹುದ್ದೆಯ ಕನಸು ಕಂಡ ಖರ್ಗೆ ಅವರು ಸಿದ್ದರಾಮಯ್ಯ ಅವರಿಗಾಗಿ ತಮ್ಮ ಪ್ರತಿಪಕ್ಷ ನಾಯಕನ ಹುದ್ದೆ ತೊರೆದು ರಾಜ್ಯ ರಾಜಕಾರಣ ಬಿಟ್ಟು ದೆಹಲಿ ಅಂಗಳಕ್ಕೆ ಜಿಗಿಯಬೇಕಾಯಿತು.ಇದರ ಬೆನ್ನಲ್ಲೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ತಮ್ಮ ಆಪ್ತ ಹಾಗೂ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋತು, ಸಿದ್ದರಾಮಯ್ಯ ಆಪ್ತ ಪಕ್ಷೇತರ ಬೈರತಿ ಬಸವರಾಜ್ ಆಯ್ಕೆಯಾಗಿ ಖರ್ಗೆ ಮುಖಭಂಗ ಅನುಭವಿಸುವಂತಾಯಿತು.ಇಂತಹ ಹಲವು ಘಟನೆಗಳು ನಡೆದವು ಖರ್ಗೆ ಅವರೊಂದಿಗೆ ಗುರುತಿಸಿಕೊಂಡ ಅನೇಕರು ಸಿದ್ದರಾಮಯ್ಯ ಆಪ್ತರಿಗಾಗಿ ಕಾಂಗ್ರೆಸ್ ಟಿಕೆಟ್ ವಂಚಿತರಾದರು ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಕೆಲವರು ಪಕ್ಷ ಬಿಟ್ಟರೆ, ಸಂಗಮೇಶ್ ಸೇರಿ ಕೆಲವರು ಪಕ್ಷೇತರರಾಗಿ ಕಣಕ್ಕಿಳಿದರು, ಎಸ್.ಆರ್.ಪಾಟೀಲ್, ವೀರ ಕುಮಾರ್ ಪಾಟೀಲ್ ಸೇರಿದಂತೆ ಹಲವಾರು ಮಂದಿ ಪಕ್ಷದ‌ ಶಿಸ್ತಿನ ಚೌಕಟ್ಟಿನಲ್ಲಿ ನೇಪಥ್ಯಕ್ಕೆ ಸರಿದರು.
    ಬದಲಾದ ಪರಿಸ್ಥಿತಿಯಲ್ಲಿ ಈಗ ಖರ್ಗೆ ನಿರ್ಣಾಯಕ ಸ್ಥಾನದಲ್ಲಿ ಕುಳಿತಿದ್ದಾರೆ.ಸಹಜವಾಗಿ ಖರ್ಗೆ ಬೆಂಬಲಿಗರು ಸಂತಸದಿಂದ ಇದ್ದಾರೆ . ಅದಕ್ಕೆ ಖರ್ಗೆ ಆಯ್ಕೆ ಸ್ವಾಗತಿಸಿ ಬಂದಿರುವ ಜಾಹೀರಾತುಗಳೇ ಸಾಕ್ಷಿ.
    ಈಗ ನಿಜವಾದ ಸವಾಲಿರುವುದು ಸಿದ್ದರಾಮಯ್ಯ ಅವರಿಗೆ. ಖರ್ಗೆ ಈಗಾಗಲೇ ತಾವು ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಗಾಂಧಿ ಕುಟುಂಬದ ಸಲಹೆ ಪಡೆಯುವುದಾಗಿ ಹೇಳಿದ್ದಾರೆ ಹಾಗೆಯೇ ಅವರು ಸೋನಿಯಾ ಗಾಂಧಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೇ ಬಾಂಧವ್ಯ ರಾಹುಲ್ ಗಾಂಧಿ ಅವರ ಜೊತೆಗಿಲ್ಲ.ಸಿದ್ದರಾಮಯ್ಯ ಅವರು ರಾಹುಲ್ ಆಪ್ತವಲಯದಲ್ಲಿದ್ದು, ಸೋನಿಯಾ ಜೊತೆಗೆ ಅಂತಹ ಸಂಪರ್ಕವಿಲ್ಲ. ಅಲ್ಲದೇ ಕರ್ನಾಟಕದ ಕುರಿತು ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಖರ್ಗೆ ಅವರ ಕೈ ಮೇಲಾಗಲಿದೆ.ಇದು ಸಿದ್ದರಾಮಯ್ಯ ಅವರ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ.
    ಹಾಗೆಯೇ ಶಿವಕುಮಾರ್ ಕೂಡಾ ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಬಹುದು. ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದಂತೆ ಖರ್ಗೆ ಅವರ ಹೆಸರು ಪ್ರಸ್ತಾಪವಾಯಿತು.ಇದರ ಸೂಚನೆ ಅರಿತ ಹಲವು ಕಾಂಗ್ರೆಸ್ ನಾಯಕರು ಖರ್ಗೆ ಪರ ಬ್ಯಾಟಿಂಗ್‌ ಆರಂಭಿಸಿದರೆ, ಶಿವಕುಮಾರ್ ಮಾತ್ರ ರಾಹುಲ್ ಗಾಂಧಿ ಜಪ ಮಾಡುತ್ತಿದ್ದರು. ಬದಲಾವಣೆಯ ಗತಿಯನ್ನು ಗುರುತಿಸಲು ಅವರಿಂದ ಸಾಧ್ಯವಾಗಲಿಲ್ಲ.ಇದೊಂದು ಕಡೆಯಾದರೆ ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಬಲಗೈ ಬಂಟನಾಗಿದ್ದ ಶಿವಕುಮಾರ್ ‌ಅಂದು ಖರ್ಗೆ ಮತ್ತವರ ಆಪ್ತವಲಯದ ಜೊತೆಗೆ ಇವರು ನಡೆದುಕೊಂಡಿದ್ದನ್ನು ನೆನಪು ಮಾಡಿಕೊಂಡರೆ ಶಿವಕುಮಾರ್ ದೊಡ್ಡ ಸವಾಲು ಎದುರಿಸಬೇಕಾದೀತು.
    ಇವೆಲ್ಲವನ್ನು ಗಮನಿಸಿದಾಗ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವ ಈ ಇಬ್ಬರ ಹಾದಿ ಅಷ್ಟು ಸುಲಭವಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಗಾದಿಯ ಸಮೀಪ ಬಂದು ಒಳೇಟಿನಿಂದ ಸೋತ ಪರಮೇಶ್ವರ್ ಈಗ ಮುಖ್ಯವಾಹಿನಿಗೆ ಬರಬಹುದು. ಖರ್ಗೆ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಪರಮೇಶ್ವರ್ ದಲಿತ ಮುಖ್ಯಮಂತ್ರಿ ಎಂಬ ಅಂಶವನ್ನು ಮುಂದೊಡ್ಡಿ ಈ ಹುದ್ದೆಯ ಪೈಪೋಟಿಯಲ್ಲಿ ಮೊದಲ ಸ್ಥಾನದಲ್ಲಿರಬಹುದು.
    ಪರಮೇಶ್ವರ್ ಅವರ ತಂದೆ ಅವರ ಕಾಲದಿಂದಲೂ ಖರ್ಗೆ ಮತ್ತವರ ಸಂಬಂಧ ಉತ್ತಮವಾಗಿಯೇ ಇದೆ.ಈ ಮಧ್ಯೆ ಕೆಲವು ಕಾರಣಗಳಿಗಾಗಿ ಪರಮೇಶ್ವರ್ ಮತ್ತು ಖರ್ಗೆ‌ ಸಂಬಂಧ ಹಳಸಿದರೂ ನಂತರದಲ್ಲಿ ‌ಸಿದ್ದರಾಮಯ್ಯ ಕಾರಣಕ್ಕೆ ಇವರಿಬ್ಬರೂ ಒಂದಾಗಿದ್ದು ಗುಟ್ಟೇನಲ್ಲ ಈಗಲೂ ಆ ಸಂಬಂಧ ಹಾಗೆಯೇ ಇದ್ದು ಪರಮೇಶ್ವರ್ ಅನುಕೂಲಕರ ಸ್ಥಿತಿಯಲ್ಲಿದ್ದಾರೆ.
    ಇದಲ್ಲದೆ ಹೋದರೆ ಬಿ.ಕೆ.ಹರಿಪ್ರಸಾದ್, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಅಲ್ಲಂ ವೀರಭದ್ರಪ್ಪ,‌ಅವರಂತಹ ಹೆಸರು ಮುಖ್ಯಮಂತ್ರಿ ಹುದ್ದೆಯ ಪೈಪೋಟಿಯಲ್ಲಿ ಕೇಳಿಬಂದರೆ ಅಚ್ಚರಿಯೇನಲ್ಲ.
    ಇದೆಲ್ಲದರ ನಡುವೆ ಖರ್ಗೆ ಅವರಿಗೆ ತಮ್ಮ ತವರು ರಾಜ್ಯದಲ್ಲಿ ಗೆಲ್ಲಲೇ ಬೇಕು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸುವಲ್ಲಿ ಅವರು ಸಮರ್ಥರಾಗದೇ ಇದ್ದರೆ, ಆ ವೈಫಲ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೇತಾಳನಂತೆ ಹೆಗಲೇರಿ ಕಾಡಲಿದೆ. ಒಂದು ವೇಳೆ ಕಾಂಗ್ರೆಸ್ ರಾಜ್ಯದಲ್ಲಿ ಅಲ್ಪ ಬಹುಮತ ಪಡೆಯಿತು ಎಂದುಕೊಳ್ಳೋಣ. ಆಗಲೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗುಂಪುಗಾರಿಕೆಯಿಂದ ಒಡೆದು ಹೋಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಖರ್ಗೆ ಅವರ ಮೇಲಿದೆ. ಸಿದ್ದರಾಮಯ್ಯ-ಶಿವಕುಮಾರ್ ನಡುವಿನ ಭಿನ್ನಮತವನ್ನು ಖರ್ಗೆ ಹೇಗೆ ಸಂಬಾಳಿಸಲಿದ್ದಾರೆ ಎನ್ನುವುದನ್ನು ಆಧರಿಸಿ ಅವರ ರಾಷ್ಟ್ರ ನಾಯಕತ್ವ ಬಲ ಪಡೆದುಕೊಳ್ಳಲಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನೊಳಗಿದ್ದೇ ಬಿಜೆಪಿಯ ಜೊತೆಗೆ ಒಳಗೊಳಗೆ ಕೈ ಜೋಡಿಸಿರುವ ಕೆಲವರನ್ನು ನಿಭಾಯಿಸುವ ಹೊಣೆಗಾರಿಕೆಯೂ ಖರ್ಗೆಯವರ ಮುಂದಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಖರ್ಗೆ ಯುಗ ಹೇಗಿರಲಿದೆ ಎಂಬ ಕುತೂಹಲ ಎಲ್ಲೆಡೆ ಇದೆ.

    ಕಾಂಗ್ರೆಸ್ ರಾಜಕೀಯ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ
    Next Article ಭಾರತದಲ್ಲಿ ಹೊಸ ರೀತಿಯ ISIS
    vartha chakra
    • Website

    Related Posts

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ಸೆಪ್ಟೆಂಬರ್ ನಲ್ಲಿ ಜಾತಿವಾರು ಜನಗಣತಿ !

    July 23, 2025

    KGF ಬಾಬು ಬಳಿ ತೆರಿಗೆ ವಸೂಲಿ ಮಾಡಿದ ಅಧಿಕಾರಿಗಳು!

    July 23, 2025

    Comments are closed.

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    FIR ದಾಖಲಿಸಲು ಇದು ಕಡ್ಡಾಯ !

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Jamesfluts on ಪರಪ್ಪನ ಅಗ್ರಹಾರದಲ್ಲಿ ದರ್ಶನ್, ಪವಿತ್ರಾ ಹೇಗಿದ್ದಾರೆ ಗೊತ್ತಾ.
    • بهترین مشاور انتخاب رشته کنکور کشور انسانی on ಟೊಮ್ಯಾಟೋ ಸಾಲಕ್ಕಾಗಿ ಲ್ಯಾಪ್ ಟಾಪ್ ಕದ್ದ.
    • VincentFrava on ಯತ್ನಾಳ್, ಸೋಮಣ್ಣನಿಗೆ ಹೈಕಮಾಂಡ್ ಬುಲಾವ್ | Yatnal
    Latest Kannada News

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?

    July 26, 2025

    CM‌ ಮತ್ತು DCM ರಾಹುಲ್ ಗಾಂಧಿ ಭೇಟಿ ನಿಗದಿ ?

    July 26, 2025

    ರಸಗೊಬ್ಬರ ದಾಸ್ತಾನೆಷ್ಟಿದೆ ಗೊತ್ತಾ ?

    July 26, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇಂದಿರಾ ಹಿಂದಿಕ್ಕಿದ ಮೋದಿ #narendramodi #indiragandhipm #bjp #india #modi #amitshah #rahulgandhi
    Subscribe