ಬೆಂಗಳೂರು,ನ.3-ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತುಫೈಲ್‌ನ ಬಂಧನಕ್ಕೆ ಕೊಡಗು ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ.
ಮಡಿಕೇರಿಯ ಗದ್ದಿಗೆ ನಿವಾಸಿಯಾದ ತುಫೈಲ್ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಿದ್ದು, ಸುಳಿವು ಸಿಕ್ಕಿದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ತುಫೈಲ್‌ನನ್ನು ಹುಡುಕಿಕೊಟ್ಟವರಿಗೆ 5 ಲಕ್ಷ ರು.ನಗದು ಬಹುಮಾನವನ್ನು ಈಗಾಗಲೇ ರಾಷ್ಟ್ರೀಯ ತನಿಖಾದಳ ಘೋಷಿಸಿದೆ. ಈತನನ್ನು ಹುಡುಕಿಕೊಂಡು ಎನ್‌ಐಎ ತಂಡ ಸೆಪ್ಟೆಂಬರ್ ತಿಂಗಳಲ್ಲಿ ಎರಡು ಬಾರಿ ಮಡಿಕೇರಿಗೆ ಬಂದಿತ್ತು. ಆದರೆ, ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ತುಫೈಲ್ ಮನೆ ಬಿಟ್ಟು 8 ತಿಂಗಳಾಗಿದೆ. 8 ತಿಂಗಳಿಂದ ಆತ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಆದರೆ, ಪ್ರವೀಣ್ ಹತ್ಯೆ ಬಳಿಕ ಆತ ಮಡಿಕೇರಿಯಲ್ಲಿಯೇ ಇದ್ದ. ಕೆಲ ದಿನಗಳ ಬಳಿಕ, ಆತ ನಾಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ
Previous Articleಕಾಂಗ್ರೆಸ್ ಟಿಕೆಟ್ ಬೇಕಾದ್ರೆ ಹೀಗೆ ಮಾಡಿ
Next Article ಫಸ್ಟ್ Rank ಪಡೆದವರೇ ಅರೆಸ್ಟ್!