ಹುಬ್ಬಳ್ಳಿ,ನ.11-ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹೇಳಿಕೆಯಂತೆ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸಿದರೆ ಅದನ್ನು ಬಾಬರಿ ಮಸೀದಿಯಂತೆ ಧ್ವಂಸ ಮಾಡಲಾಗುವುದು’ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಟಿಪ್ಪು ಕರ್ನಾಟಕಕ್ಕೇ ಕಳಂಕ. ಮೈಸೂರು ಮಹಾರಾಜರಿಗೆ ಅವಮಾನವಾಗುವಂತೆ ಅಲ್ಲಿಯೇ ಆಡಳಿತ ನಡೆಸಿದ್ದ. ಒಂದು ವೇಳೆ ಅವನ ಮೂರ್ತಿ ಪ್ರತಿಷ್ಠಾಪಿಸಿದ್ದೇ ಆದರೆ, ಅದನ್ನು ಒಡೆದು ಹಾಕುತ್ತೇವೆ ಎಂದು ಗುಡುಗಿದರು.
ಟಿಪ್ಪು ಮೂರ್ತಿ ಪ್ರತಿಷ್ಠಾಪಿಸುವಂಥ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬೇಕಾದರೆ, ಸಂತ ಶಿಶುನಾಳ ಷರೀಫ್, ಅಬ್ದುಲ್ ಕಲಾಂ ಅವರಂತಹ ಮೂರ್ತಿ ಪ್ರತಿಷ್ಠಾಪಿಸಿ’ ಎಂದು ಸಲಹೆ ನೀಡಿದರು.
‘ಸಾವಿರಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ, ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡಿದ ಟಿಪ್ಪುವಿನ ಜಯಂತಿ ಇಲ್ಲಿನ ಈದ್ಗಾ ಮೈದಾನದಲ್ಲಿ ಆಚರಿಸಿದ್ದು ಅಕ್ಷಮ್ಯ ಅಪರಾಧ. ಟಿಪ್ಪು ಜಯಂತಿ ಆಚರಿಸಿ ಮೈದಾನವನ್ನು ಅಪವಿತ್ರಗೊಳಿಸಲಾಗಿತ್ತು. ಇದೀಗ ನಾವು ಗೋಮೂತ್ರದಿಂದ ಶುದ್ಧ ಮಾಡಿ, ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ವಿಫಲವಾಗಿದೆ. ಆದರೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆಚರಿಸಲು ಅನುಮತಿ ನೀಡಬೇಕೆಂದು ಮನವಿ ನೀಡಿದ ಸಂಘಟನೆಯಲ್ಲಿಯೇ ಒಡಕು ಉಂಟಾಗಿತ್ತು. ಅವರಲ್ಲಿದ್ದ ಬಹುತೇಕರು ಬಂದಿಲ್ಲ, ಮುಸ್ಲಿಮರು ಸಹ ಬಂದಿಲ್ಲ.ಇದರಿಂದ ಟಿಪ್ಪು ಜಯಂತಿ ಆಚರಣೆ ವೈಫಲ್ಯ ಕಂಡಿದೆ’ ಎಂದರು.
‘ಪಾಲಿಕೆ ವಿರೋಧ ಪಕ್ಷದ ನಾಯಕರು ಪಾಲಿಕೆ ಕಟ್ಟಡದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು ಸರಿಯಲ್ಲ. ಸರ್ಕಾರಿ ಕಚೇರಿಯಲ್ಲಿ ಜಯಂತಿ ಆಚರಿಸಿರುವ ಕುರಿತು ಮೇಯರ್ ಅವರ ಮೇಲೆ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪೊಲೀಸ್ ದೂರು ನೀಡುತ್ತೇವೆ’ ಎಂದು ಹೇಳಿದರು.
‘530 ವರ್ಷಗಳ ಹಿಂದೆ ಕನಕದಾಸರು ಹೇಳಿದ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಜಾತಿ, ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮಾಡದೆ ಏಕತೆಯಲ್ಲಿ ಬಾಳಬೇಕು ಎಂದು ಕನಕರು ಹೇಳಿದ್ದರು. ಆದರೆ, ಇಂದಿಗೂ ಜಾತಿ, ಜಾತಿಗಳ ನಡುವೆ ಒಡಕು ಇದೆ, ದ್ವೇಷವಿದೆ. ಅದನ್ನು ಹೋಗಲಾಡಿಸುವಲ್ಲಿ ನಾವೆಲ್ಲ ಒಂದಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.
Archives
- March 2026
- February 2026
- January 2026
- December 2025
- November 2025
- October 2025
- September 2025
- August 2025
- July 2025
- June 2025
- May 2025
- April 2025
- March 2025
- February 2025
- January 2025
- December 2024
- November 2024
- October 2024
- September 2024
- August 2024
- July 2024
- June 2024
- May 2024
- April 2024
- March 2024
- February 2024
- January 2024
- December 2023
- November 2023
- October 2023
- September 2023
- August 2023
- July 2023
- June 2023
- May 2023
- April 2023
- March 2023
- February 2023
- January 2023
- December 2022
- November 2022
- October 2022
- September 2022
- August 2022
- July 2022
- June 2022
- May 2022
- April 2022

