ಮಂಗಳೂರು,ಡಿ.6-ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಉಗ್ರ ಶಾರೀಕ್ ಬ್ಯಾಂಕ್ ಖಾತೆಗೆ ಹೆಚ್ಚಿನ ಹಣ ಡಾಲರ್ ಮೂಲಕ ಹರಿದು ಬಂದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಬರ್ ಶಾರೀಕ್ ಸ್ಪೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎನ್‍ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ದೊರೆಯುತ್ತಿದ್ದು ಆತನ ಹಣಕಾಸಿನ ಮೂಲ ಜಾಲಾಡಿದಾಗ ಹೆಚ್ಚಿನ ಹಣ ಡಾಲರ್ ಮೂಲಕ ಅಕೌಂಟ್‍ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ.
ಮೈಸೂರಿನ ನೂರಾರು ಮಂದಿಯ ಅಕೌಂಟ್‍ಗೆ ಡಾಲರ್ ಭಾರತೀಯ ಕರೆನ್ಸಿಯಾಗಿ ವರ್ಗಾವಣೆ ಆಗಿದ್ದು 40ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಗಿದೆ.
ಶಾರೀಕ್ ನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‍ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‍ನನ್ನು ಎನ್‍ಐಎ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತನ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನ ಡಾರ್ಕ್ ವೆಬ್‍ನಲ್ಲಿರುವ ಅಕೌಂಟ್‍ಗೆ ಡಾಲರ್ ರೂಪದಲ್ಲಿ ಸಾಕಷ್ಟು ಹಣ ಬಂದಿರುವ ದಾಖಲೆ ಲಭ್ಯವಾಗಿದ್ದು ಅಧಿಕಾರಿಗಳು ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.
ಡಾರ್ಕ್ ವೆಬ್‍ನಲ್ಲಿರುವ ಶಾರೀಕ್ ಅಕೌಂಟ್‍ಗೆ ಲಕ್ಷಾನುಗಟ್ಟಲೇ ಮೌಲ್ಯದ ಡಾಲರ್ ಡೆಪೋಸಿಟ್ ಆಗಿದ್ದು, ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ವರ್ಗಾಯಿಸುತ್ತಿದ್ದ. ಭಾರತೀಯ ಕರೆನ್ಸಿಯನ್ನು ತನ್ನ ಪರಿಚಯಸ್ಥರ ಅಕೌಂಟ್‍ಗೆ ಹಾಕಿಸಿ ಅದನ್ನು ಉಪಯೋಗಿಸುತ್ತಿದ್ದ. ಮೈಸೂರಿನಲ್ಲಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದು, ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಸುಮಾರು 100 ಅಧಿಕ ಮೈಸೂರಿಗರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದ್ದು, ಎನ್‍ಐಎ ಅಧಿಕಾರಿಗಳು 40 ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.
ಈತನ ಕೃತ್ಯ ತಿಳಿಯದಿದ್ದ ಸಾಕಷ್ಟು ಮಂದಿ ಈತನ ಸ್ನೇಹವನ್ನು ನಂಬಿ ಅಕೌಂಟ್‍ಗೆ ಹಣ ಹಾಕಿ ಶಾರೀಕ್ ಹೇಳಿದ ಬೇರೆ, ಬೇರೆ ಅಕೌಂಟ್‍ಗೆ ವರ್ಗಾಯಿಸುತ್ತಿದ್ದರು.
ಮೈಸೂರು ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಕೌಂಟ್‍ಗೂ ಈತನ ಹಣ ವರ್ಗಾವಣೆ ಆಗಿದೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಎಲ್ಲಾ ರಾಜ್ಯದಲ್ಲೂ ತನಿಖೆ ಆರಂಭಿಸಿದ್ದು, ಉಗ್ರನ ಜಾಲ ಇಡೀ ದೇಶದಲ್ಲೇ ಪಸರಿಸಿದ ಆತಂಕ ಎದುರಾಗಿದೆ
Previous Articleಹಿಜಾಬ್ ವಿರುದ್ಧ ನೈತಿಕ ಪೊಲೀಸ್ ಗಿರಿ ಬೇಡ ಎಂದ ಇರಾನ್
Next Article BJP ಮಾಡಿದೆ ಬಿಗ್ ಗೇಮ್ ಪ್ಲಾನ್