ಜಗತ್ತಿನ ಅತಿದೊಡ್ಡ ಸಿರಿವಂತ ಎಲೊನ್ ಮಸ್ಕ್ ಗೆ ಅರ್ಜೆಂಟಾಗಿ ಯಾರಾದರೂ ಒಬ್ಬ ಮೂರ್ಖ ಬೇಕಂತೆ,ಆ ಮೂರ್ಖನಿಗಾಗಿ ಹುಡುಕಾಟ ನಡೆಸಿದ್ದಾರೆ. ಅದು ಯಾಕೆ ಗೊತ್ತಾ..
ಈ ಮಸ್ಕ್ ಇದೀಗ ಟ್ವಿಟರ್ ಸಂಸ್ಥೆಯ ಮುಖ್ಯಸ್ಥರಾಗಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ.ಇಲ್ಲಿ ಅವರು ಕೈಗೊಂಡ ಕೆಲವು ನಿರ್ಧಾರಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದವು ಈ ಹಿನ್ನೆಲೆಯಲ್ಲಿ ಅವರು ತಾವು ಟ್ವಿಟರ್ ಮುಖ್ಯಸ್ಥರಾಗಿ ಮುಂದುವರೆಯ ಬೇಕಾ ಬೇಡವಾ ಎಂಬ ಸಮೀಕ್ಷೆ ನಡೆಸಿದ್ದರು.
ಕಳೆದ 2 ದಿನಗಳ ಹಿಂದೆ ಮಸ್ಕ್ ಸಮೀಕ್ಷೆಯನ್ನು ಪ್ರಾರಂಭಿಸಿದ್ದರು ಹಾಗೂ ಅದರ ಫಲಿತಾಂಶಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದರು. ವೋಟ್ ಮಾಡುವಾಗ ಜಾಗರೂಕರಾಗಿರಿ. ಟ್ವಿಟ್ಟರ್ ಮುಖ್ಯಸ್ಥನಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಕೈಯಲ್ಲಿದೆ ಎಂದು ಮಸ್ಕ್ ಬಳಕೆದಾರರಲ್ಲಿ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿ 1.7 ಕೋಟಿ ಮಂದಿ ವೋಟ್ ಮಾಡಿದ್ದಾರೆ. ವೋಟ್ ಮಾಡಿದ ಶೇ.57.5 ರಷ್ಟು ಬಳಕೆದಾರರು ಸಿಇಒ ಹುದ್ದೆಯನ್ನು ತೊರೆಯುವಂತೆ ಮಸ್ಕ್‌ಗೆ ಸೂಚಿಸಿದ್ದಾರೆ. ಶೇ.42.5 ರಷ್ಟು ಬಳಕೆದಾರರು ಟ್ವಿಟ್ಟರ್ ಸಿಇಒ ಸ್ಥಾನದಲ್ಲಿಯೇ ಮುಂದುವರಿಯಲು ತಿಳಿಸಿದ್ದಾರೆ. ತಮ್ಮ ಸ್ಥಾನದಿಂದ ಕೆಳಗಿಳಿಯಲು ಹೆಚ್ಚಿನವರು ಸೂಚಿಸಿರುವುದರಿಂದ ಮಸ್ಕ್ ಇದೀಗ ತಾವು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ
ಆದರೆ ಅದಕ್ಕೊಂದು ಕಂಡೀಷನ್ ಹಾಕಿದಾರೆ ಅದೇನೆಂದರೆ ಯಾರಾದರೂ ಮೂರ್ಖ ಸಿಕ್ಕ ತಕ್ಷಣವೇ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ಬಳಿಕ ಕಂಪನಿಯ ಸಾಫ್ಟ್‌ವೇರ್ ಹಾಗೂ ಸರ್ವರ್ ತಂಡಗಳನ್ನು ಮುನ್ನಡೆಸುತ್ತೇನೆ ಎಂದು ತಿಳಿಸಿದ್ದಾರೆ.ಈಗ ಮಸ್ಕ್ ಪ್ರಕಾರ ಟ್ವಿಟರ್ ಮುನ್ನಡೆಸೋಕೆ ಮೂರ್ಖ ಬೇಕಂತೆ