ನವದೆಹಲಿ,ಜ.13-ತಮಿಳುನಾಡು BJP ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರ ಭದ್ರತೆಯನ್ನು ಹೆಚ್ಚಿಸಿರುವ ಗೃಹ ಸಚಿವಾಲಯವು ಝಡ್ ಶ್ರೇಣಿಯ ಭದ್ರತೆಯನ್ನು ನೀಡಿದೆ. ಅಣ್ಣಾಮಲೈ ಅವರಿಗೆ ಈ ಹಿಂದೆ ವೈ ಕೆಟಗರಿ ಭದ್ರತೆಯಿದ್ದು ಝಡ್ ಶ್ರೇಣಿಗೆ ಭದ್ರತೆ ಹೆಚ್ಚಿಸಿರುವುದರಿಂದ ಸಿಆರ್ಎಫ್ನ ಒಟ್ಟು 33 ಕಮಾಂಡೋಗಳು ಅವರಿಗೆ ಭದ್ರತೆಯನ್ನು ನೀಡಲಿದ್ದಾರೆ.ಅಣ್ಣಾಮಲೈ ಅವರಿಗೆ ಅಪಾಯ ಹೆಚ್ಚಾಗುವ ಆತಂಕದ ಹಿನ್ನೆಲೆಯಲ್ಲಿ ಅವರಿಗೆ ಈ ಭದ್ರತೆ ನೀಡಲಾಗಿದೆ.
ಮಾಜಿ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ತಮಿಳುನಾಡು ಬಿಜೆಪಿ ಅಧ್ಯಕ್ಷರು ಮಾವೋವಾದಿಗಳು ಮತ್ತು ಧಾರ್ಮಿಕ ಉಗ್ರಗಾಮಿಗಳಿಂದ ಬೆದರಿಕೆ ಹೆಚ್ಚುತ್ತಿದೆ ಎಂದು ಹೇಳಲಾಗಿದೆ.
ಈ ಕುರಿತು ಐಬಿ ಬೆದರಿಕೆ ವರದಿ ಬಂದ ನಂತರ ಅಣ್ಣಾಮಲೈ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದೆ.
Previous Articleಬೆಂಗಳೂರು VV campusನಲ್ಲಿ ಚಿರತೆಯಲ್ಲ ಕಾಡುಬೆಕ್ಕು
Next Article ಸದ್ಗುರು Jaggi Vasudevಗೆ ತೀವ್ರ ಹಿನ್ನಡೆ?