ಬೆಂಗಳೂರು – ಚೆ ಗೆವಾರ ಈ ಹೆಸರು ಎಂತವರ ಮನದಲ್ಲೂ ರೋಮಾಂಚನ ಮೂಡಿಸುವ ಹೆಸರು.ಕ್ಯೂಬಾದ ಈ ಕ್ರಾಂತಿಕಾರಿ ನಾಯಕ ವಿಶ್ವದ ಹಿರಿಯಣ್ಣ ಅಮೇರಿಕಾದ ನಿದ್ದೆಗೆಡಿಸಿದ್ದರು.ಸಾಮ್ರಾಜ್ಯ ಶಾಹಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಈ ನಾಯಕ ಸಮಾಜವಾದ,ಸಮಾನತೆಯ ಕನಸು ಕಾಣುವ ಎಲ್ಲರ ಕಣ್ಮಣಿ.
ಚೆ ಎಂದೇ ಕರೆಯಲ್ಪಡುವ ಈತನ ಕುರಿತು ಸತ್ಯ ಕತೆಗಳೆಷ್ಟಿವೆಯೋ ಅದಕ್ಕಿಂತಲೂ ಹೆಚ್ಚಿನ ದಂತಕತೆಗಳಿವೆ.ಜಗತ್ತಿನೆಲ್ಲೆಡೆ ಈತನ ಅಭಿಮಾನಿಗಳ ದೊಡ್ಡ ಪಡೆಯೇ ಇದೆ.
ಒಂದು ರೀತಿಯಲ್ಲಿ ಈತನ ಆತ್ಮಕತೆಯಂದೇ ಹೇಳಲಾಗುವ ಈತನ ಅನುಭವದ ಕಥಾನಕ ಮೋಟರ್ ಸೈಕಲ್ ಡೈರಿ ಜಗತ್ತಿನ ಬಹುತೇಕ ಎಲ್ಲಾ ಭಾಷೆಗಳಿಗೂ ಅನುವಾದಗೊಂಡಿದೆ.
ಚೆ ಇದೀಗ ಪರಲೋಕ ವಾಸಿಯಾಗಿದ್ದು ಈತನ ಮಗಳು ಈಗ ಕ್ರಾಂತಿಕಾರಿಗಳ ಕಣ್ಮಣಿ.ಜಗತ್ತಿನ ಅನೇಕ ರಾಷ್ಟ್ರಗಳನ್ನು ಸುತ್ತುತ್ತಾ ತನ್ನ ತಂದೆಯ ಬಗ್ಗೆ ಹೇಳುತ್ತಾ,ಕೇಳುತ್ತಾ ಸಾಗುತ್ತಿದ್ದಾಳೆ ಈಕೆ ಇದೀಗ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತಿದ್ದಾರೆ.
ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕಾರ್ಮಿಕ ಸಂಘಟನೆ CITUನ ರಾಷ್ಟ್ರೀಯ ಕಾರ್ಯಕಾರಿಣಿ ಬೆಂಗಳೂರಿನಲ್ಲಿ ನಡೆಯುತ್ತಿದೆ.ಈ ಹಿನ್ನೆಲೆಯಲ್ಲಿ ಜನವರಿ 19 ರಂದು ಚೆ ಗೆವಾರ ಮಗಳು ಅಲಿಡಾ ಗೆವಾರ ಹಾಗೂ ಮೊಮ್ಮಗಳು ಎಸ್ತಫಾನಿಯ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗು ನಾಗರಿಕ ಸನ್ಮಾನವನ್ನು ಮಾಡಲಾಗುತ್ತಿದೆ.ಹಾಗೆಯೇ ಇಬ್ಬರೂ ಆಸಕ್ತರೊಂದಿಗೆ ಸಂವಾದ ನಡೆಸುತ್ತಾರೆ.
Che Guevara ಮಗಳು ಮೊಮ್ಮಗಳು ಬೆಂಗಳೂರಿಗೆ ಬರುತ್ತಿದ್ದಾರೆ
Previous ArticleAmbulanceಗಳ ಸುಗಮ ಸಂಚಾರಕ್ಕೆ ಸೆನ್ಸಾರ್ ಟ್ರಾಫಿಕ್ ಸಿಗ್ನಲ್
Next Article Metro ಏರಿದ ನವ ವಧು