ಬೆಳಗಾವಿ-
‘ಕರ್ನಾಟಕ ಪ್ರದೇಶ Congress ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕಾರಣದಲ್ಲಿರಲು ಯೋಗ್ಯರಲ್ಲ. ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಮನೆಯ ಮೇಲೆ ಕಲ್ಲು ಎಸೆಯಬಾರದು’ ಎಂದು BJP ಹಿರಿಯ ನಾಯಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮತ್ತು ಶಿವಕುಮಾರ್ ಇಬ್ಬರೂ ಉತ್ತಮ ಸ್ನೇಹಿತರು. ಆದರೆ ಒಬ್ಬ ವ್ಯಕ್ತಿಯಿಂದ ನಮ್ಮಿಬ್ಬರ ಸ್ನೇಹ ಹಾಳಾಗಿದೆ. ನಾವಿಬ್ಬರೂ ಒಂದೇ ಬಾರಿ ರಾಜಕಾರಣ ಪ್ರವೇಶಿಸಿದೆವು. ಮೊದಲ ಬಾರಿಗೆ ವಿಧಾನಸಭೆ Electionಯಲ್ಲಿ ಸ್ಪರ್ಧಿಸಿದಾಗ, ನಾವಿಬ್ಬರೂ ಸೋಲು ಕಂಡೆವು. ನಂತರದಲ್ಲಿ ಇಬ್ಬರೂ ಯಶಸ್ವಿಯಾಗಿದ್ದೇವೆ. ಇದಾದ ನಂತರ ಒಟ್ಟಾಗಿಯೇ ಇದ್ದ ನಮ್ಮಿಬ್ಬರ ಸಂಬಂಧ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರ ಕಾರಣಕ್ಕಾಗಿ ಸಂಬಂಧ ಹಾಳಾಯಿತು’ ಎಂದು ಹೇಳಿದರು.
‘ಗ್ರಾಮೀಣ ಕ್ಷೇತ್ರದ ಶಾಸಕರ ಕಾರಣಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಮಹಿಳೆಯೊಬ್ಬರ ಮೂಲಕ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲಾಗಿದೆ. ಈ ಸಂಚಿನ ಸಂಬಂಧ ಹಲವು ದಾಖಲೆಗಳಿವೆ. ಈ ಪ್ರಕರಣ CBI ಗೆ ನೀಡಿದರೆ, ಸಂಪೂರ್ಣ ದಾಖಲೆಗಳನ್ನು ಒದಗಿಸುತ್ತೇನೆ’ ಎಂದು ತಿಳಿಸಿದರು. ‘ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಶಿವಕುಮಾರ್ ಮತ್ತು ಬೆಳಗಾವಿ ಗ್ರಾಮೀಣ ಶಾಸಕರು, ಇಬ್ಬರು ಯುವಕರು, ಶಿವಕುಮಾರ್ ಕಾರು ಚಾಲಕ ಪರಶಿವಮೂರ್ತಿ, ಗ್ರಾನೈಟ್ ಉದ್ಯಮಿ ಶಿವಕುಮಾರ್ ಸಂಚು ಮಾಡಿದ್ದಾರೆ. ಶಾಂತಿನಗರ ಸಹಕಾರ ಬ್ಯಾಂಕ್ ನ ಹತ್ತು ಸಾವಿರ ಕೋಟಿ ಅಕ್ರಮ ಮುಚ್ಚಿ ಹಾಕಲು ಈ ಬ್ಲ್ಯಾಕ್ಮೇಲ್ ಮಾಡಲಾಯಿತು. ನನ್ನ ಸೋದರ ಬಾಲಚಂದ್ರ ಮತ್ತು ಮಾಜಿ ಶಾಸಕ ನಾಗರಾಜ್ ಮೂಲಕ ಷರತ್ತು ಹಾಕಿಸಿದ್ದರು. ಅದನ್ನು ಒಪ್ಪದ ಕಾರಣಕ್ಕೆ CD ಬಿಡುಗಡೆ ಮಾಡಿದರು’ ಎಂದು ಇಡೀ ಘಟನಾವಳಿಗಳನ್ನು ವಿವರಿಸಿದರು.
ಸಂಚು ಹೇಗೆ ಮಾಡಲಾಯಿತು ಎಂಬ ಕುರಿತಾದ ಧ್ವನಿ ಮುದ್ರಣವೊಂದನ್ನು ಬಿಡುಗಡೆ ಮಾಡಿದ ಅವರು ‘ನನ್ನ ವಿರುದ್ಧ ಹಲವಾರು CD ಗಳನ್ನು ಮಾಡಿಟ್ಟುಕೊಂಡಿದ್ದಾರೆ. ಅವುಗಳ ಬಿಡುಗಡೆಗೆ ಸಂಚು ಮಾಡಿದ್ದಾರೆ. ಅಷ್ಟೇ ಅಲ್ಲ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು ಹಲವಾರು ಜನರ CD ಗಳನ್ನೂ ಮಾಡಿಟ್ಟುಕೊಂಡಿದ್ದಾರೆ. ನೀವು ನಂಬಲಾರದ ನಾಯಕರು ಈ CD ಗಳಲ್ಲಿದ್ದಾರೆ. ಈ ಎಲ್ಲದರ CBI ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.