ಬೆಂಗಳೂರು.
ಮುಂಬರುವ ವಿಧಾನಸಭೆ Electionಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆಯಾಗಲು ಪಣತೊಟ್ಟಿರುವ ಬೈರತಿ ಸುರೇಶ್ (Byrathi Suresh) ಕ್ಷೇತ್ರದ ಮತದಾರರಿಗೆ TV ಹಂಚತೊಡಗಿದ್ದಾರೆ. ಮನೋರಾಯನಪಾಳ್ಯ ವಾರ್ಡ್ ನಲ್ಲಿ ಪ್ರತಿ ಮನೆಗೆ ಉಚಿತ TV ವಿತರಿಸಿದ ಅವರು, ‘ನಮ್ಮ ಕ್ಷೇತ್ರದಲ್ಲಿ ಬಡ, ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ನೆರವು ನೀಡುವ ದೃಷ್ಟಿಯಿಂದ TV ವಿತರಿಸಲಾಗುತ್ತಿದೆ’ ಎಂದು ಹೇಳಿದರು.
ಕೊರೋನ ಸಾಂಕ್ರಮಿಕ ಲಾಕ್ ಡೌನ್ ಸಂದರ್ಭದಲ್ಲಿ ಆನ್ ಲೈನ್ ತರಗತಿಗಳಿಗೆ ಮಕ್ಕಳಿಗೆ ಟ್ಯಾಬ್, ಟೀವಿಗಳ ಅವಶ್ಯಕತೆ ಇತ್ತು. ಬಹಳ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ TV ಖರೀದಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ಇದರಿಂದ ನೆರವಾಗಲಿದೆ’ ಎಂದರು. ‘ನಮ್ಮ ಕ್ಷೇತ್ರದ ಜನರು ಒಂದು ಕುಟುಂಬದಂತೆ. ಅವರ ನೋವು, ನಲಿವುಗಳಿಗೆ ಸ್ಪಂದಿಸುವುದು ಶಾಸಕನಾದ ನನ್ನ ಕರ್ತವ್ಯ. ಆದ್ದರಿಂದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಉಚಿತವಾಗಿ TV ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಕೋಮುವಾದಿ ಪಕ್ಷಗಳಿಂದ ದೂರ ಇರಿ. ಜಾತಿ, ಜಾತಿ ನಡುವೆ ದ್ವೇಷ ಬಿತ್ತುವ BJP ಪಕ್ಷದವರು ಕೊರೋನ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು. ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಜನಪ್ರಿಯ ಆಡಳಿತದಲ್ಲಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಈಡೇರಿಸಿದ್ದರು’ ಎಂದು ಹೇಳಿದರು.