Bengaluru
ಹಿರಿಯ IAS ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿರುವ ಹಿರಿಯ IPS ಅಧಿಕಾರಿ ಡಿ.ರೂಪಾ (D Roopa) ಇದೀಗ ಆತ್ಮಹತ್ಯೆ ಮಾಡಿಕೊಂಡ IAS ಅಧಿಕಾರಿ ಡಿ.ಕೆ.ರವಿ (DK Ravi) ವಿಷಯವನ್ನು ಪ್ರಸ್ತಾಪಿಸುವ ಮೂಲಕ ಬೆಳವಣಿಗೆಗೆ ಹೊಸ ಆಯಾಮ ನೀಡಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ ರೂಪಾ ಮಾಡಿದ್ದ ಪ್ರಸ್ತಾಪಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅದಕ್ಕೆ ರೋಹಿಣಿ ಸಿಂಧೂರಿ ಕೆಲವು ಸ್ಪಷ್ಟನೆ ನೀಡಿದ್ದಾರೆ. ಅದೇ ಅಂಶಗಳನ್ನು ಉಲ್ಲೇಖಿಸಿ ಇದೀಗ ರೂಪಾ ಸ್ಪಷ್ಟನೆಯ ಜೊತೆಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಡಿ.ಕೆ. ರವಿ ಸತ್ತದ್ದು mental illness ಇಂದ ಅಂತ ರೋಹಿಣಿ ಹೇಳಿದ್ದಾರೆ. ಅವರು ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ಪ್ರಶ್ನೆ ಇಷ್ಟೇ. ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ CBI ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೇ ಅಲ್ಲವೇ? ಅದೇ ರೀತಿ IAS ಅಧಿಕಾರಿಗಳಿಗೆ ಕಳಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಈ ರೀತಿಯ ಚಿತ್ರಗಳನ್ನು ಯಾವ ಯಾವ ಅಧಿಕಾರಿಗಳಿಗೆ, ಯಾಕೆ ಕಳಿಸಿದರು, ಹಾಗೂ ಸೇವಾ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿ. ಸಂಧಾನಕ್ಕೆ MLA ಬಳಿ ಹೋದದ್ದು ಯಾಕೆ? ಯಾವ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಅಥವಾ ಯಾವ ಅನೈತಿಕ ನಡತೆ ಮುಚ್ಚಲು? ಉತ್ತರಿಸಿ. ನನಗೆ ಬೇಡ, ಸರ್ಕಾರಕ್ಕೆ ಉತ್ತರಿಸಿ’ ಎಂದು ಕೇಳಿದ್ದಾರೆ.
‘ರೋಹಿಣಿ ಸಿಂಧೂರಿ ಯಾವ forum ಹೋದರೂ, ಸತ್ಯ ಸತ್ಯವೇ. ಸತ್ಯವನ್ನು ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ’ ಎನ್ನುವ ಮೂಲಕ ಇಡೀ ವಿದ್ಯಮಾನಗಳಿಗೆ ಹೊಸ ಆಯಾಮ ನೀಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯಾಗಿರುವ ರೂಪಾ ಹಿಂದೊಮ್ಮೆ ರೋಹಿಣಿ ಸಿಂಧೂರಿ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರು. ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಧ್ಯಪ್ರವೇಶದಿಂದ ಇವೆಲ್ಲವೂ ತಣ್ಣಗಾಗಿದ್ದವು. ಆದರೆ, ಈ ಬಾರಿ ಅವರು ಕೆಲವು ನಿರ್ದಿಷ್ಟ ಆರೋಪಗಳನ್ನು ಮಾಡಿರುವುದು ಕುತೂಹಲ ಮೂಡಿಸಿದೆ.
ರೋಹಿಣಿ ಸಿಂಧೂರಿ ಅವರನ್ನು ಉಲ್ಲೇಖಿಸಿ ಭ್ರಷ್ಟಾಚಾರದ ಆರೋಪ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಉತ್ತರಿಸಿ ಎಂದು ಹೇಳಿದ್ದಾರೆ. ಇದಕ್ಕೆ ರೋಹಿಣಿ ಅವರ ಉತ್ತರವೇನೆಂದು ಕಾದುನೋಡಬೇಕಿದೆ.