ಬೆಂಗಳೂರು, ಫೆ.22-
ದೇವರು, ದೇವಾಲಯ ಎಂದರೆ,ಆಸ್ತಿಕರ ಪಾಲಿಗೆ ಪುಣ್ಯದ ಸ್ಥಳ. ಹೀಗಾಗಿ ದೇವರ ದರ್ಶನ, ಪೂಜೆ ಸಲ್ಲಿಸುವವರು ಶ್ರದ್ಧಾ ಭಕ್ತಿಯಿಂದ ಬಂದು ಪೂಜೆ ಸಲ್ಲಿಸಿ, ಮನದಾಳದ ಮಾತುಗಳನ್ನು ಭಕ್ತಿಯಿಂದ ದೇವರಿಗೆ ಅರ್ಪಿಸಿ ಪುನೀತರಾಗುತ್ತಾರೆ. ದೇವರ ಪೂಜೆಗೆಂದು ದೇವಾಲಯಕ್ಕೆ ಬರುವವರು ಹೂವು, ಹಣ್ಣು, ತೆಂಗಿನಕಾಯಿ ಸೇರಿದಂತೆ ಹಲವು ವಸ್ತುಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ.
ಈ ರೀತಿ ದೇವಾಲಯಕ್ಕೆ ಬಂದ ಕಿಡಿಗೇಡಿಗಳು, ದೇವರಿಗೆ ಹಾರ ಹಾಕಿ ಎಂದು ಪ್ಲಾಸ್ಟಿಕ್ ಕವರ್ ನಲ್ಲಿ ಮಾಂಸದ ತುಂಡುಗಳನ್ನಿಟ್ಟು ಸಿಬ್ಬಂದಿಗೆ ನೀಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ನಡೆದಿದೆ. ಅದೂ ಕೂಡ ದೇವರುಗಳಲ್ಲೇ ಅತ್ಯಂತ ಕೋಪದ ದೇವರೆಂದರೆ ಶನಿ ಮಹಾತ್ಮ. ಈ ದೇವರ ಅವಕೃಪೆಗೆ ಯಾವುದೇ ಕಾರಣಕ್ಕೂ ಒಳಗಾಗಬಾರದು. ತಮ್ಮ ಬದುಕಿನಲ್ಲಿ ಕಾಣಿಸಿಕೊಂಡ ಅನಿಷ್ಟಗಳಿಂದ ಪಾರು ಮಾಡುವಂತೆ ಶನಿ ದೇವರನ್ನು ಪ್ರಾರ್ಥಿಸುತ್ತಾರೆ.
ಇಂತಹ ಸಮಯದಲ್ಲಿ ತಮ್ಮಿಂದ ಯಾವುದೇ ಅಪಚಾರವಾಗಬಾರದು ಎಂದು ಭಕ್ತರು ವಿಶೇಷವಾದ ಕಾಳಜಿವಹಿಸುತ್ತಾರೆ. ಹೀಗಿರುವಲ್ಲಿ ಈ ಕಿರಾತಕರು ಶನಿ ದೇವರಿಗೆ ಅರ್ಪಿಸಲು ತಂದ ಹೂವಿನ ಜೊತೆಗೆ ಮಾಂಸದ ತುಂಡುಗಳನ್ನು ಇಟ್ಟು ಕೊಟ್ಟಿದ್ದಾರೆ.
ಚಿಕ್ಕ ಮಧುರೆ ಎಂದೇ ಕರೆಯಲ್ಪಡುವ ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನ (Sri Shani Mahatma Temple, Kanasawadi Doddaballapur) ದಲ್ಲಿ ಈ ಘಟನೆ ನಡೆದಿದೆ. ದೇವಾಲಯಕ್ಕೆ ಬಂದ ಇಬ್ಬರು ಅಪರಿಚಿತ ಯುವಕರಿಂದ ಕೃತ್ಯ ನಡೆದಿದ್ದು, ಕಿಡಿಗೇಡಿಗಳ ವಿರುದ್ಧ ದೇವಾಲಯದ ಅರ್ಚಕರು ಮತ್ತು ಆಡಳಿತ ವರ್ಗ ದೊಡ್ಡಬೆಳವಂಗಲ ಪೊಲೀಸರಿಗೆ ದೇವಾಲಯದ ಸಿಬ್ಬಂದಿ ದೂರು ನೀಡಿದ್ದಾರೆ.
ಕನಸವಾಡಿಯ ಇತಿಹಾಸ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಇಬ್ಬರು ಯುವಕರು ಬಂದಿದ್ದಾರೆ. ದೇವರಿಗೆ ಹಾಕಿ ಎಂದು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಗಡೆ ಮಾಂಸವಿಟ್ಟು ದೇವಸ್ಥಾನದ ಸಿಬ್ಬಂದಿಗೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕವರ್ ತೆಗೆದುಕೊಂಡ ಸಿಬ್ಬಂದಿ, ದೇವರಿಗೆ ಹಾರ ಹಾಕಲೆಂದು ಗರ್ಭಗುಡಿಯೊಳಗೆ ಹೋಗುವಾಗ, ಮಾಂಸದ ತುಂಡು ಹಾರದಿಂದ ಕೆಳಗೆ ಬಿದ್ದಿದೆ. ಕೂಡಲೇ ದೇವಸ್ಥಾನದ ಸಿಬ್ಬಂದಿ ಕವರ್ ಹೊರಗೆ ಎಸೆದಿದ್ದಾರೆ.ಅಷ್ಟೇ ಅಲ್ಲ ಇಂತಹ ಘಟನೆಯಿಂದ ಬೆಚ್ಚಿದ್ದಾರೆ. ತಕ್ಷಣವೇ ಅಲ್ಲಿದ್ದವರಿಗೆ ತಿಳಿಸಿ ಕವರ್ ಕೊಟ್ಟ ಕಿಡಿಗೇಡಿಗಳಿಗಾಗಿ ಹುಡುಕಾಡಿದ್ದಾರೆ. ಆದರೆ ಕವರ್ ನೀಡಿದವರೇ ಅಲ್ಲಿಂದ ಆ ಕಿರಾತಕರು ಪರಾರಿಯಾಗಿದ್ದಾರೆ.
ಕಿಡಿಗೇಡಿಗಳು ದೇವಸ್ಥಾನಕ್ಕೆ ಬಂದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೇವಾಲಯದ ಸಿಬ್ಬಂದಿ ದೊಡ್ಡಬೆಳವಂಗಲ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇವರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸದ್ಯ ಆಡಳಿತ ಮಂಡಳಿ ದೇವಸ್ಥಾನದಲ್ಲಿ ಪೇಪರ್ ಒಳಗೊಂಡ ಹಾರಗಳನ್ನು ನಿಷೇಧಿಸಿದೆ.
7 Comments
гадание на индийском пасьянсе http://www.indiyskiy-pasyans-online.ru .
вывод из запоя на дому http://www.vyvod-iz-zapoya-rostov111.ru/ .
вывод. из. запоя. анонимно. ростов. вывод. из. запоя. анонимно. ростов. .
вывод из запоя ростов вывод из запоя ростов .
заказать семена через интернет с доставкой https://semenaplus74.ru/ .
Как купить аттестат 11 класса с официальным упрощенным обучением в Москве
Процесс получения диплома стоматолога: реально ли это сделать быстро?