ಕೋಲಾರ : ಕಳೆದ ಮೂರು ಚುನಾವಣೆಗಳನ್ನು ಪಕ್ಷೇತರನಾಗಿ ಸ್ಪರ್ಧಿಸಿದ್ದು ಕಳೆದ ಎಂ ಎಲ್ ಸಿ ಚುನಾವಣೆಯಲ್ಲೇ ಬಿ ಜೆ ಪಿ ಪಾಳೆಯದಲ್ಲಿ ಗುರುತಿಸಿಕೊಳ್ಳುತ್ತಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್ ನಾಳೆ ಅಧಿಕೈತವಾಗಿ ಬಿ ಜೆ ಪಿ ಪಕ್ಷಕ್ಕೆ ಸೇರುವುದಾಗಿ ಘೋಷಿಸಿದ್ದಾರೆ.
ಹೊರ ವಲಯದ ಕೋಗಿಲಹಳ್ಳೆಯ ತಮ್ಮ ನಿವಾಸದ ಬಳಿ ತಮ್ಮ ಬೆಂಬಲಿಗರ ಹಾಗು ಮುಖಂಡರ ಸಭೆ ನಡೆಸಿದ ನಂತರ ಮಾತನಾಡಿದ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರ್ಪಡೆ ಕುರಿತು ಆ ಪಕ್ಷದ ಮುಖಂಡರನ್ನು ಭೇಟಿ ಮಾಡಿದರೂ ಪ್ರಯೋಜನ ಆಗಲಿಲ್ಲ. ಇನ್ನು ಜೆಡಿಎಸ್ ನನಗೆ ಅಡ್ಜೆಸ್ಟ್ ಆಗೋಲ್ಲ.ಬಿಜೆಪಿಯವರು ಪಕ್ಷ ಸೇರಲು ಆಹ್ವಾನ ಕೊಟ್ಟಿದ್ದಾರೆ ಅಲ್ಲದೇ
ನಮ್ಮ ಕಾರ್ಯಕರ್ತರೂ ಸಹ ಸಹ ಒಪ್ಪಿದ್ದಾರೆ. ಆದ್ದರಿಂದ ನಾಳೆ ಹತ್ತು ಗಂಟೆಗೆ ಮಲ್ಲೇಶ್ವರಂ ನ ಬಿಜೆಪಿ ಕಛೇರಿಯಲ್ಲಿ ಬಿ ಜೆಪಿ ಯ ಎಲ್ಲಾ ಮುಖಂಡರೊಂದಿಗೆ ಸೇರಲಿದ್ದೇನೆ ಎಂದರು.
ಅಲ್ಲದೇ ನನ್ನ ಜೊತೆಗೆ ಮಾಲೂರಿನ ಮಾಜಿ ಶಾಸಕ ಮಂಜುನಾಥ್ ಗೌಡ ಸಹ ಒಟ್ಟಿಗೆ ಪಕ್ಷ ಸೇರ್ಪಡೆಯಾಗಲಿದ್ದಾರೆಂದು ಹೇಳಿದರು.