Times of India ಮತ್ತು ವಿಜಯ ಕರ್ನಾಟಕ ಪತ್ರಿಕೆಗಳ ಮಾಲೀಕ ಸಂಸ್ಥೆ ಟೈಮ್ಸ್ ಗ್ರೂಪ್‌ನ ಬಹುನಿರೀಕ್ಷಿತ ಆಸ್ತಿ ವಿಭಜನೆಯ ಒಪ್ಪಂದ ಮಾಲೀಕ ಸಹೋದರರಾದ ಸಮೀರ್ ಜೈನ ಮತ್ತು ವಿನೀತ್ ಜೈನ ಮಧ್ಯೆ ಗುರುವಾರ ಅಂತಿಮಗೊಂಡಿದೆ ಎಂದು ಹೇಳಲಾಗಿದೆ. ಒಪ್ಪಂದವು ಅಂತಿಮಗೊಂಡ ನಂತರ ಸಮೀರ್ ಜೈನ್ ಅವರು ಟೈಮ್ಸ್ ಆಫ್ ಇಂಡಿಯಾ, ಎಕನಾಮಿಕ್ ಟೈಮ್ಸ್ ನವಭಾರತ್ ಟೈಮ್ಸ್ ಮತ್ತು ವಿಜಯ ಕರ್ನಾಟಕದಂತಹ ಪತ್ರಿಕೆಗಳು ಮತ್ತು ಅವುಗಳ ಆನ್‌ಲೈನ್ ಆವೃತ್ತಿಗಳು ಸೇರಿದಂತೆ ಟೈಮ್ಸ್ ಸಮೂಹದ ಸಂಪೂರ್ಣ ಮುದ್ರಣ ವ್ಯವಹಾರಗಳ ಮೇಲೆ ಹಿಡಿತ ಇಟ್ಟುಕೊಳ್ಳುವ ಸಾಧ್ಯತೆಯಿದೆ.
ಸಮೀರ್ ಅವರ ಕಿರಿಯ ಸಹೋದರ ವಿನೀತ್ ಜೈನ್ ಅವರು ಬ್ರಾಡ್‌ಕಾಸ್ಟ್, ರೇಡಿಯೋ ಮಿರ್ಚಿ, ಎಂಟರ್‌ಟೈನ್‌ಮೆಂಟ್ (ENIL), ಮತ್ತು ಫಿಲ್ಮ್‌ಫೇರ್, ಫೆಮಿನಾ, ಈವೆಂಟ್ ಗಳ ಮಾಲೀಕತ್ವ ಮುಂತಾದ ಇತರ ವ್ಯವಹಾರಗಳನ್ನು ತಮ್ಮ ಆನ್‌ಲೈನ್ ಆವೃತ್ತಿಗಳೊಂದಿಗೆ (ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ ಅಡಿಯಲ್ಲಿ ಕ್ಲಬ್ ಮಾಡಲಾಗಿದೆ) ತಮ್ಮದಾಗಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ವಿನೀತ್ ಇಟಿ ಮನಿ ಮತ್ತು OTT ಪ್ಲಾಟ್‌ಫಾರ್ಮ್ MX ಪ್ಲೇಯರ್ ಅನ್ನು ಸಹ ತಮ್ಮದಾಗಿಸಿಕೊಳ್ಳಲಿದ್ದಾರೆ. ಪ್ರಸ್ತುತ, MX ಪ್ಲೇಯರ್ ಜೊತೆಗೆ ಎಲ್ಲಾ ಆನ್‌ಲೈನ್ ಆವೃತ್ತಿಗಳು ಟೈಮ್ಸ್ ಇಂಟರ್ನೆಟ್ ಲಿಮಿಟೆಡ್‌ನ ಭಾಗವಾಗಿದೆ, ಇದು ಜೈನ್ ಸಹೋದರರ ನಡುವಿನ ವಿವಾದದ ಪ್ರಮುಖ ಅಂಶವಾಗಿತ್ತು.
ಟೈಮ್ಸ್ ಗುಂಪಿನ ಪ್ರಿಂಟ್ ವ್ಯವಹಾರಗಳು ಆದಾಯದ ದೃಷ್ಟಿಯಿಂದ ತುಂಬಾ ದೊಡ್ಡದಾಗಿರುವುದರಿಂದ, ವಿಭಜನೆಯ ಮೊತ್ತವನ್ನು ಸರಿದೂಗಿಸಲು ವಿನೀತ್ ಅವರು ತನ್ನ ಹಿರಿಯ ಸಹೋದರನಿಂದ ಕನಿಷ್ಠ 3,500 ಕೋಟಿ ರೂಪಾಯಿಗಳ ನಗದು ಹಣವನ್ನು ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ವಿವಿಧ ಅಂಶಗಳ ಆಧಾರದ ಮೇಲೆ ಈ ಮೊತ್ತವು 5,000 ಕೋಟಿ ರೂ. ತನಕ ತಲುಪಬಹುದು ಎಂದೂ ಅಂದಾಜಿಸಲಾಗಿದೆ.