ಗಂಗೆಯಲ್ಲಿ ಮೆಡಲ್ ವಿಸರ್ಜನೆ ತಮ್ಮ ಅಹವಾಲನ್ನು ಆಲಿಸದ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿರುವ ಪದಕ ವಿಜೇತ ಕುಸ್ತಿಪಟುಗಳು ಈಗ ತಮ್ಮ ಹೋರಾಟದ ಕೊನೆಯ ಭಾಗ ಎನ್ನುವಂತೆ ತಾವು ಸಾಧನೆ ಮಾಡಿ ಪಡೆದಿರುವ ಮೆಡಲ್ ಗಳನ್ನು ಹರಿದ್ವಾರದಲ್ಲಿ ಹರಿಯುವ ಗಂಗಾ ನದಿಯಲ್ಲಿ ವಿಸರ್ಜನೆ ಮಾಡಲು ನಿರ್ಧರಿಸಿದ್ದಾರೆ.
ಈಗಾಗಲೇ ಈ ಭಾರತೀಯ ಕುಸ್ತಿಪಟುಗಳ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿರುವುದು ಮಾತ್ರವಲ್ಲದೆ ವಿಶ್ವದಾದ್ಯಂತ ಈ ವಿಷಯ ಚರ್ಚೆಯಾಗುತ್ತಿದೆ. ಈಗ ಇವರು ಮೆಡಲ್ ವಿಸರ್ಜನೆಯನ್ನು ಕೈಗೊಂಡರೆ ಅದು ಭಾರತಕ್ಕೆ ದೊಡ್ಡ ರೀತಿಯಲ್ಲಿ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ.
ಈಗಾಗಲೇ ಬಿಜೆಪಿಯ ಓರ್ವ ಹಿರಿಯನಾಯಕ ಈ ಕುಸ್ತಿಪಟುಗಳೊಂದಿಗೆ ಮಾತನಾಡಿ ಒಂದಷ್ಟು ಕಾಲಾವಕಾಶ ಕೇಳಿಕೊಂಡಿರುವುದು ತಿಳಿದು ಬಂದಿದೆ ಭಾರತೀಯ ಕುಸ್ತಿ ಫೆಡರೇಶನ್ ನ ಮುಖ್ಯಸ್ಥ ನ ವಿರುದ್ಧ ಕೈಗೊಂಡಿರುವ ಈ ಹೋರಾಟದಿಂದ ಯಾವ ರೀತಿಯಲ್ಲೂ ಪರಿಣಾಮ ಕಾಣದಿರುವುದರಿಂದ ಹತಾಶರಾದ ಈ ಕುಸ್ತಿಪಟುಗಳು ಮುಂದೆ ಏನೇನು ಹೋರಾಟ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.