ಬೆಂಗಳೂರು – ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸುದ್ದಿಯಲ್ಲಿದ್ದಾರೆ.
ಅವರನ್ನು ಅವಧೂತ ಎಂದು ನಂಬಿರುವ ಅನೇಕ ಮಂದಿ ರಾಜಕಾರಣಿಗಳು ವಾಣಿಜ್ಯೋದ್ಯಮಿಗಳು ಸೇರಿದಂತೆ ಪ್ರಭಾವಿಗಳು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಅವರು ನುಡಿದ ಮಾತು ಸತ್ಯವಾಗಲಿದೆ ಎನ್ನುವುದು ಇವರನ್ನ ನಂಬುವವರ ಅನಿಸಿಕೆ.
ವಯಸ್ಸಿನಲ್ಲಿ ಕಿರಿಯರಾದರೂ ವಿನಯ್ ಗುರೂಜಿ ಅವರ ಪಾದ ಪೂಜೆಗೆ ಅತ್ಯಂತ ಹಿರಿಯರಾದ ರಾಜಕಾರಣಿಗಳು ಹಿಂಜರಿಯುವುದಿಲ್ಲ ಅವರ ಭವಿಷ್ಯ ವಾಣಿ ಕೇಳಲು ಸದಾ ಹಾತೊರೆಯುತ್ತಾರೆ ಅವರು ತಮಗೆ ನೀಡುವ ಆಶೀರ್ವಾದ ನಿಜವಾಗಲಿದೆ ಎನ್ನುವುದು ಇವರೆಲ್ಲರ ನಂಬಿಕೆ.
ಅದರಂತೆ ಇದೀಗ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್ ಡಿ ತಮ್ಮಯ್ಯ ಅವರು ಗೌರಿ ಗದ್ದೆಗೆ ತೆರಳಿ ವಿನಯ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪರವಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನು ಮಾಡಿದ್ದಾರೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸಿ ಯಶಸ್ಸು ಕಂಡಿದ್ದಾರೆ ಅವರ ಪರಿಶ್ರಮದಿಂದ ನಾವೆಲ್ಲ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಇದಕ್ಕಾಗಿ ಅವರಿಗೆ ಸೂಕ್ತ ಪ್ರತಿಫಲ ಸಿಗಬೇಕು. ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಇದಕ್ಕಾಗಿ ಆಶೀರ್ವಾದ ಮಾಡಿ ಪ್ರಾರ್ಥನೆ ಸಲ್ಲಿಸಿ ಎಂದು ಕೋರಿದ್ದಾರೆ.
ಇದನ್ನು ಆಲಿಸಿದ ವಿನಯ ಗುರೂಜಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ದಿನ ಇನ್ನೂ ಹತ್ತಿರದಲ್ಲೇ ಇದೆ. ಅವರದ್ದು ಮಗುವಿನ ಮನಸ್ಸು, ಒಳಗೊಂದು ಹೊರಗೊಂದು ಇಲ್ಲದ ವ್ಯಕ್ತಿತ್ವ ಎಂದು ಹೇಳಿದ್ದಾರೆ.
ವಿನಯ್ ಗುರೂಜಿ ಅವರು ಈ ರೀತಿಯ ಭವಿಷ್ಯ ನುಡಿಯುವ ವೇಳೆ ಅವರ ಪಕ್ಕದಲ್ಲಿದ್ದ ವಿಧಾನ ಪರಿಷತ್ ನ ಜೆಡಿಎಸ್ ಸದಸ್ಯ ಶರವಣ ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.
3 Comments
озвучание или озвучивание http://www.ozvuchivanie-pomeshhenij.ru .
онлайн порно видео онлайн порно видео .
ВНЖ цифрового кочевника Испании ВНЖ цифрового кочевника Испании .