ಬೆಂಗಳೂರು – ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (KCCI) ಜೂನ್ 22 ರಂದು ಒಂದು ದಿನ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ವಿದ್ಯುತ್ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿದ್ದ ಕೆಸಿಸಿಐ ಇದಕ್ಕಾಗಿ ಜೂ.10 ರಂದು ಸರ್ಕಾರಕ್ಕೆ ಒಂದು ವಾರಗಳ ಗಡುವು ವಿಧಿಸಿತ್ತು. ಒಂದು ವೇಳೆ ದರ ಏರಿಕೆಯನ್ನು ಹಿಂಪಡೆಯದೇ ಇದ್ದಲ್ಲಿ ಎಲ್ಲಾ ಕೈಗಾರಿಕೆಗಳನ್ನೂ ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿತ್ತು
ಈ ವಿಷಯವಾಗಿ ಸರ್ಕಾರದ ಜತೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡುವ ಪ್ರಯತ್ನ ವಿಫಲವಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಬಂಧ್ ಗೆ ಕರೆ ನೀಡಲಾಗಿದೆ ಎಂಬ ಸ್ಪಷ್ಟನೆ ನೀಡಿದೆ.
ಮೇಲ್ನೋಟಕ್ಕೆ ಈ ವಾದ ಸರಿ ಎಂಬಂತೆ ಕಾಣುತ್ತದೆ. ಆದರೆ, ವಾಸ್ತವ ಸ್ಥಿತಿ ಬೇರೆಯೇ ಇದೆ.ಇಂಧನ ಇಲಾಖೆ ಗೃಹ ಜ್ಯೋತಿ ಯೋಜನೆ ಮೂಲಕ ಜನ ಸಾಮಾನ್ಯರ ಪರವಾಗಿ ನಿಲ್ಲುವ ಮೂಲಕ ಕ್ರಾಂತಿಕಾರಿ ತೀರ್ಮಾನ ಕೈಗೊಂಡಿದೆ.ಇದರಿಂದ ವಿದ್ಯುತ್ ಇಲಾಖೆ ಸರ್ಕಾರದ ಒಂದು ಜನಪ್ರಿಯ ಇಲಾಖೆಯಾಗುವತ್ತ ದಾಪುಗಾಲು ಇಟ್ಟಿದೆ.ಕೇವಲ ಉಚಿತ ವಿದ್ಯುತ್ ಯೋಜನೆ ಮಾತ್ರವಲ್ಲದೇ ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿಸಲು ಇಂಧನ ಇಲಾಖೆ ಕೈಗೊಳ್ಳುತ್ತಿರುವ ಕ್ರಮಗಳು ಗಮನ ಸೆಳೆದಿವೆ.
ಇಂತಹ ಜನಪ್ರಿಯತೆ ನಿರೀಕ್ಷಿಸದ ಬಿಜೆಪಿ ಇದಕ್ಕಾಗಿ ವ್ಯವಸ್ಥಿತ ತಂತ್ರ ರೂಪಿಸಿದೆ.ಅದಕ್ಕಾಗಿ ಸ್ಥಾಪಿತ ಹಿತಾಸಕ್ತಿಗಳನ್ನು ಬಳಸಿಕೊಳ್ಳತೊಡಗಿದೆ. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಒಕ್ಕೂಟದ ಚುನಾಯಿತ ಪ್ರತಿನಿಧಿಗಳು ಬಿಜೆಪಿ ಮತ್ತು ಸಂಘ ಪರಿವಾರದ ಟೂಲ್ ಕಿಟ್ ನ ಭಾಗದಂತೆ ವರ್ತಿಸುವ ಮೂಲಕ ಬಂದ್ ಕರೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಾಸ್ತವವಾಗಿ ವಿದ್ಯುತ್ ದರ ಹೆಚ್ಚಳ ಹಾಗೂ ವಾಪಸ್ ಪಡೆಯುವ ವಿಷಯದಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ಕೇಂದ್ರ ಸರ್ಕಾರದ ಕಾಯಿದೆಯಂತೆ ದರ ಕುರಿತು ನಿರ್ಧಾರ ಕೈಗೊಳ್ಳಲು ಎಲ್ಲಾ ರಾಜ್ಯಗಳಲ್ಲಿ ದರ ನಿಯಂತ್ರಣ ಆಯೋಗ ರಚನೆಯಾಗಿದ್ದು,ಇವುಗಳು ನ್ಯಾಯಾಲಯದ ರೀತಿಯಲ್ಲಿ ಕೆಲಸ ಮಾಡುತ್ತವೆ.ಪ್ರತಿ ವರ್ಷ ಎಸ್ಕಾಂಗಳು ದರ ಪರಿಷ್ಕರಣೆ ಕುರಿತು ಆಯೋಗಕ್ಕೆ ಮನವಿ ಸಲ್ಲಿಸಬೇಕು
ಅದರಂತೆ ವಿದ್ಯುತ್ ದರ ಹೆಚ್ಚಳ ಕುರಿತಂತೆ Escom ಗಳು ಸಲ್ಲಿಸಿದ ಮನವಿಯ ಬಗ್ಗೆ ಮುದ್ರಣ ಮಾಧ್ಯಮದಲ್ಲಿ ಪ್ರಾಪಕ ಪ್ರಚಾರ ಮತ್ತು ಜಾಹೀರಾತು ನೀಡಲಾಗುತ್ತದೆ. ಪ್ರತಿ ಬಾರಿ ಇದನ್ನು ಕಡ್ಡಾಯವಾಗಿ ಮಾಡಲಾಗುತ್ತದೆ.ಈ ಪ್ರಸ್ತಾವನೆಯನ್ನು ಗ್ರಾಹಕರು ಅಧ್ಯಯನ ನಡೆಸಿ,ತಮ್ಮ ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಲಾಗುತ್ತದೆ
ಅದರಂತೆ ದರ ಹೆಚ್ಚಳ ಮನವಿ ಕುರಿತು ಕೆಇಆರ್‌ಸಿ ಸಾರ್ವಜನಿಕರ ಅಹವಾಲು ಆಲಿಸಿತ್ತು. ಲಿಖಿತವಾಗಿ ಮತ್ತು ವಿಚಾರಣೆ ವೇಳೆ ಆಯೋಗದ ಮುಂದೆ ಕೂತು ಹಾಜರಾಗಿ ತಕರಾರು ಸಲ್ಲಿಸಲು ಅವಕಾಶ ನೀಡಿತ್ತು. KCCI ಮತ್ತು ಕಾಸಿಯಾ ದಿಂದ ಕೇವಲ ನೆಪ ಮಾತ್ರಕ್ಕೆ ವಿರೋಧದ ಒಂದು ಅರ್ಜಿ ದಾಖಲಾಗಿದ್ದು ಬಿಟ್ಟರೆ ಅದರಲ್ಲಿ ತಾವು ದರ ಹೆಚ್ಚಳ ಯಾಕೆ ವಿರೋಧಿಸುತ್ತಿದ್ದೇನೆ ಎಂಬ ಕುರಿತು ವೈಜ್ಞಾನಿಕ ತಾಂತ್ರಿಕ ಹಾಗೂ ಆರ್ಥಿಕ ಕಾರಣಗಳನ್ನು ನೀಡಿಲ್ಲ.
ಇದರ ನಂತರ ಕೆ. ಸಿ.ಸಿ.ಐನ ಯಾವುದೇ ಪ್ರತಿನಿಧಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ನಡೆದ ಬಹಿರಂಗ ವಿಚಾರಣೆಗೆ ಹಾಜರಾಗಲಿಲ್ಲ.ತಮ್ಮ ಅಹವಾಲು ಅಥವಾ ಆಕ್ಷೇಪಣೆ ಸಲ್ಲಿಸಲಿಲ್ಲ. ಹೀಗಾಗಿ ಆಯೋಗ ತನ್ನದೇ ನೆಲೆಗಟ್ಟಿನಲ್ಲಿ ವಿಚಾರಣೆ ಪೂರ್ಣಗೊಳಿಸಿ ಆದೇಶ ಪ್ರಕಟಿಸಿದೆ.
ಇದಾದ ನಂತರ ದರ ಹೆಚ್ಚಳ ಆದೇಶ ಪ್ರಕಟಿಸುತ್ತಿದ್ದಂತೆ ಅದಕ್ಕೆ ತಕರಾರು ಸಲ್ಲಿಸಿ ಆದೇಶ ತಡೆಹಿಡಿಯುವಂತೆ ಮೇಲ್ಮನವಿ ಸಲ್ಲಿಸುವ ಅವಕಾಶ ಇದ್ದರೂ. KCCI ಇಂತಹ ಕ್ರಮಕ್ಕೆ ಮುಂದಾಗಲಿಲ್ಲ. ದರ ಹೆಚ್ಚಳ ಆದೇಶ ಪ್ರಕಟಗೊಂಡ ಎರಡು ತಿಂಗಳ ನಂತರ ಪೂರ್ವಾನ್ವಯವಾಗಿ ಜಾರಿಗೊಂಡಿದೆ.Election ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇಂತಹ ನಿರ್ಧಾರವನ್ನು ಚುನಾವಣೆ ಆಯೋಗ ಕೈಗೊಂಡಿದೆ.ಇದರಲ್ಲಿ ಇಂಧನ ಇಲಾಖೆಯ ಪಾತ್ರವಿಲ್ಲ
ಆದರೆ ಇದೀಗ ರಾಜ್ಯ ಸರ್ಕಾರ ಹೆಚ್ಚಳ ಆದೇಶ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ಬಂದ್ ಕರೆ ನೀಡಿದೆ.ನಿಯಮಗಳ ಪ್ರಕಾರ ಸರ್ಕಾರಕ್ಕೆ ಆದೇಶ ವಾಪಸ್ಸು ಪಡೆಯುವ ಅಧಿಕಾರವಿಲ್ಲ.
ಆದೇಶ ಜಾರಿಯಾಗಬಾರದು ಎಂದರೆ ಹೆಚ್ಚಳದ ದರವನ್ನು ಸರ್ಕಾರ ಸಹಾಯಧನದ ಮೂಲಕ ಹೊಂದಾಣಿಕೆ ಮಾಡಬೇಕು ಇದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.
ಇದೇ ನಿಜವಾದ ಕಾರಣ – KCCI ನ ಆಡಳಿತ ಮಂಡಳಿಯ ಹಿರಿಯ ಉಪಾಧ್ಯಕ್ಷ ಸೇರಿದಂತೆ ಬಹುತೇಕ ಎಲ್ಲರೂ ರಾಜ್ಯ ಬಿಜೆಪಿಯ ವಿವಿಧ ಘಟಕ ಮತ್ತು ಮೋರ್ಚಾಗಳ ಪದಾಧಿಕಾರಿಗಳಾಗಿದ್ದಾರೆ. KCCI ನ ಪ್ರತಿನಿಧಿಗಳಾಗಿ ಇವರು ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಪರ ನಿಲ್ಲುವ ಬದಲಿಗೆ ಬಿಜೆಪಿಯ ಕಾರ್ಯಸೂಚಿ ಜಾರಿಗೊಳಿಸಲು ಮುಂದಾಗಿದ್ದಾರೆ.
Previous ArticleAccident city ಬೆಂಗಳೂರು-ಪ್ರತಿನಿತ್ಯ ಮೂವರು ಬಲಿ
Next Article ಕರ್ನಾಟಕ ಬಂದ್ ಯಾಕೆ?-FKCCI ಪ್ರಶ್ನೆ