Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಲಂಗು ಲಗಾಮಿಲ್ಲದ ಶಕ್ತಿ ಯೋಜನೆ | Shakti Scheme
    ರಾಜಕೀಯ

    ಲಂಗು ಲಗಾಮಿಲ್ಲದ ಶಕ್ತಿ ಯೋಜನೆ | Shakti Scheme

    vartha chakraBy vartha chakraAugust 4, 2023464 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೂ‌ ಮುನ್ನ ರಾಜ್ಯದ ಜನತೆಗೆ‌ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅವ್ಯವಸ್ಥೆಯ ಆಗರವಾಗಿದ್ದು,ಇದಕ್ಕೆ ಲಂಗು ಲಗಾಮಿಲ್ಲದಂತಾಗಿದೆ.
    ಈ ಯೋಜನೆಯಡಿ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಈ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಇಟಿಎಂ ಯಂತ್ರದ ಮೂಲಕ ಶೂನ್ಯ ಟಿಕೆಟ್‌ ವಿತರಿಸಲಾಗುತ್ತಿದೆ.
    ಯೋಜನೆ ಜಾರಿಗೆ ಬಂದ ಆರಂಭದ 20 ದಿನಗಳ ಅವಧಿಯಲ್ಲಿ ನಾಲ್ಕೂ ನಿಗಮಗಳಲ್ಲಿ ಇದಕ್ಕೆ ಆಗಿರುವ ವಾಸ್ತವಿಕ ವೆಚ್ಚ 250.96 ಕೋಟಿ ರೂಪಾಯಿ. ಇಷ್ಟೂ ಮೊತ್ತವನ್ನು ಬಿಡುಗಡೆ ಮಾಡುವಂತೆ ಸಾರಿಗೆ ನಿಗಮಗಳು ಬೇಡಿಕೆ ಸಲ್ಲಿಸಿವೆ.
    ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನಿಗಮಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ತಕ್ಷಣವೇ ಈ ಹಣ ಬಿಡುಗಡೆ ಮಾಡಬೇಕು,ಇಲ್ಲವಾದರೆ ನಿಗಮಗಳು ಅಪಾರ ನಷ್ಟ ಹೊಂದಲಿವೆ ಎಂದು ಮನವಿಯಲ್ಲಿ
    ತಿಳಿಸಿದೆ.

    ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಸರ್ಕಾರ, ಈ ಯೋಜನೆಗಾಗಿ ಅಂದಾಜು ಮಾಡಿ ವಾರ್ಷಿಕವಾಗಿ ನಿಗಧಿ ಪಡಿಸಿರುವ ಸಹಾಯಧನ 1,998 ಕೋಟಿ ರೂಪಾಯಿಯಲ್ಲಿ ₹125.47 ಕೋಟಿ ರೂಪಾಯಿ ಭರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ತಕರಾರು:
    ಸರ್ಕಾರದ ಈ ಆದೇಶಕ್ಕೆ ಇದೀಗ ಆರ್ಥಿಕ ಇಲಾಖೆ ತಕರಾರು ಸಲ್ಲಿಸಿದೆ.ಹಣ ಬಿಡುಗಡೆಗೆ ಇಲಾಖೆ ಕೆಲವು ನಿಯಮ‌ ರೂಪಿಸಿದೆ.ಈ ನಿಯಮಗಳು ಎಲ್ಲಾ ಇಲಾಖೆಗಳಿಗೂ ಅನ್ವಯಿಸುತ್ತವೆ.ನಿಯಮ ಮೀರಿ ಯಾವುದೇ ಇಲಾಖೆಗೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ.
    ಶಕ್ತಿ ಯೋಜನೆಗೆ ಹಣ ಬಿಡುಗಡೆಗೆ ಯಾವುದೇ ಅಡ್ಡಿಯಿಲ್ಲ.ಆದರೆ,ನಿಗಮಗಳು ಈ ಯೋಜನೆ ಅನ್ವಯ ಎಷ್ಟು ಮಂದಿ ಪ್ರಯಾಣಿಕರು ಸೌಲಭ್ಯ ಪಡೆದಿದ್ದಾರೆ ಎಂಬ ಖಚಿತ ವಿವರ ನೀಡಬೇಕು.ಪ್ರತಿ ಬಸ್ಸಿನಲ್ಲಿ ಶೇಕಡಾ ಐವತ್ತು ಸೀಟುಗಳು ಶಕ್ತಿ ಯೋಜನೆಗೆ ಮೀಸಲು ಎಂದರೂ‌ ಕೂಡಾ ಪ್ರತಿ ಬಸ್ ಎಲ್ಲಿಂದ ಆರಂಭವಾಗಿ ಎಲ್ಲಿಯವರೆಗೆ ಚಲಿಸುತ್ತದೆ, ಎಷ್ಟು ದೂರ,ಪ್ರತಿ ಕಿಲೋಮೀಟರ್ ಗೆ ಎಷ್ಟು ವೆಚ್ಚವಾಗಲಿದೆ ಎಂಬ ವಿವರ ನೀಡುವಂತೆ ಕೇಳಲಾಗಿದೆ.

    ಯೋಜನೆಯ ಫಲಾನುಭವಿ ಯಾವ ಸ್ಥಳದಲ್ಲಿ ಬಸ್ಸು ಹತ್ತಿ ಎಲ್ಲಿ ಇಳಿಯುತ್ತಾರೋ ಆ ಹಂತದವರೆಗೆ ಹಣ ನೀಡಬಹುದು ಅದಕ್ಕೆ ವಿವರ ನೀಡಬೇಕು.ಅದನ್ನು ಬಿಟ್ಟು ಪ್ರತಿಯೊಂದು ಬಸ್ಸಿನ ಶೇಕಡಾ ಐವತ್ತರಷ್ಟು ಹಣ ನೀಡಬೇಕು ಎಂಬುದು ಸಮರ್ಥನೀಯವಲ್ಲ ಎಂದು ಆರ್ಥಿಕ ಇಲಾಖೆ ವರದಿ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
    ಪ್ರತಿಯೊಂದು ನಿಗಮದಲ್ಲಿ ಎಷ್ಟು ಬಸ್ಸುಗಳು ಪ್ರತಿ ನಿತ್ಯ ಸಂಚರಿಸುತ್ತಿವೆ.ಅವುಗಳ ಆರಂಭಿಕ ಸ್ಥಳ ಹಾಗೂ ಅಂತ್ಯದ ವಿವರ ಬೇಕು.ಕಡಿಮೆ ದೂರವಾದರೆ,ದಿನದಲ್ಲಿ ಎಷ್ಟು ಬಾರಿ ಸಂಚರಿಸುತ್ತವೆ, ಕ್ರಮಿಸಿದ ದೂರ,ಸಂಚರಿಸಿದ ಪ್ರಯಾಣಿಕರ ವಿವರ ಸಂಗ್ರಹಿಸಿ ಪ್ರತಿ ಬಸ್ಸಿಗೆ ಇಷ್ಟು ಮೊತ್ತ ಎಂಬ ವಿವರ ನೀಡಬೇಕು ಆಗ ಮಾತ್ರವೇ ಅದನ್ನು ಭರಿಸಬಹುದು ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.
    ಯೋಜನೆ ಜಾರಿಯಾಗಿ ಇಷ್ಟು ದಿನಗಳು ಕಳೆದರೂ ಇಲ್ಲಿಯವರೆಗೆ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿಲ್ಲ.ಹೀಗಾಗಿ ಅವರ ಪ್ರಯಾಣದ ವಿವರ ಲಭ್ಯವಾಗುತ್ತಿಲ್ಲ ಎನ್ನುವುದೂ ಸೇರಿದಂತೆ ಕೆಲವು ಮೂಲಭೂತ ವಿವರ ನೀಡಿದರೆ ಹಣ ಬಿಡುಗಡೆ ಸುಲಭವಾಗಲಿದೆ.ಜೊತೆಗೆ,ಯೋಜನೆಯೂ ಸಾರ್ಥಕತೆ ಪಡೆಯಲಿದೆ.ಇಲ್ಲವಾದರೆ ಇದಕ್ಕೆ ಲಂಗು ಲಗಾಮಿಲ್ಲದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುವುದಾಗಿ ತಿಳಿದು ಬಂದಿದೆ.

    m public transport shakti scheme shakti scheme karnataka ಕಾಂಗ್ರೆಸ್ Election
    Share. Facebook Twitter Pinterest LinkedIn Tumblr Email WhatsApp
    Previous Articleಜಾಮೀನು ಕೊಡಿಸದ ವಕೀಲರ ಕಿಡ್ನ್ಯಾಪ್ | Kidnap
    Next Article ಗೃಹ ಜ್ಯೋತಿ ಕ್ರಾಂತಿಕಾರಿ ಯೋಜನೆ – ಕೆ.ಜೆ.ಜಾರ್ಜ್ | KJ George
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025

    Leave A Reply Cancel Reply

    Categories
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • db bet казино on ಯಡಿಯೂರಪ್ಪ ಅವರನ್ನು ಅನುಕರಿಸುವ ವಿಜಯೇಂದ್ರ | Yediyurappa
    • TimothyNug on ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • manchester cigarettes on May 3, 2023 51st Year Free Mass Marriage at Sri Kshetra Dharmasthala
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    October 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    October 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    October 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಒಂದೇ ವರ್ಷದಲ್ಲಿ 3ನೇ ಗಂಡನನ್ನೂ ಬಿಟ್ಟನಟಿ#varthachakra #malayalamactresses #meeravasudevan #divorce #fact
    Subscribe