ಚಿತ್ರದುರ್ಗ, ಅ.15 – ಮನೆಯಲ್ಲಿ ಟಿವಿ ರಿಮೋಟ್‌ಗಾಗಿ ಮನೆಯಲ್ಲಿ ಅಣ್ಣ-ತಮ್ಮಂದಿರಿಬ್ಬರು ಕಿತ್ತಾಡುವುದನ್ನು ಬಿಡಿಸಲು ಹೋದ ತಂದೆ ಎಸೆದ ಕತ್ತರಿ ಸೀದಾ ಹೋಗಿ ಹಿರಿ ಮಗನ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದಿದೆ.
ಟಿವಿ ರಿಮೋಟ್ ಗಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ಹಿನ್ನೆಲೆಯಲ್ಲಿ, ಸಿಟ್ಟಿಗೆದ್ದ ತಂದೆ ತನ್ನ ಹಿರಿಮಗನ ಮೇಲೆ ಕತ್ತರಿ ಎಸೆದಿದ್ದಾರೆ. ಆದರೆ, ತಂದೆ ಎಸೆದ ಕತ್ತರಿಯು ಬಾಲಕನ ಕುತ್ತಿಗೆಗೆ ಸಿಲುಕಿ ಏಟು ಬಿದ್ದು ರಕ್ತಸ್ರಾವದಿಂದ ಸಾವು ಸಂಭವಿಸಿದೆ. ಚಂದ್ರಶೇಖರ್ (16) ಮೃತ ದುರ್ದೈವಿ ಬಾಲಕನಾಗಿದ್ದಾನೆ. ಮೃತ ಬಾಲಕ ಚಂದ್ರಶೇಖರ್‌ನೊಂದಿದೆ ಆತನ ತಮ್ಮ ಪವನ್ (14) ರಿಮೋಟ್ ಗಾಗಿ ಗಲಾಟೆ ಮಾಡಿಕೊಂಡಿದ್ದರು.
ಇನ್ನು ಮನೆಯಲ್ಲಿ ಪದೇ ಪದೆ ಟಿವಿ ರಿಮೋಟ್‌ಗಾಗಿ ಮಕ್ಕಳು ಕಿತ್ತಾಡುವುದನ್ನು ನೋಡಿದ ತಂದೆಯು, ಇಂದು ಸಿಟ್ಟಿಗೆದ್ದು ಕತ್ತರಿ ಎಸೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಇನ್ನು ಬಟ್ಟೆ ಕತ್ತರಿಸುವ ಕತ್ತರಿಯು ಭಾರವಾಗಿದ್ದು, ಕುತ್ತಿಗೆ ಹಾಗೂ ಕಿವಿ ಭಾಗಕ್ಕೆ ಚುಚ್ಚಿಕೊಂಡು ತೀವ್ರ ಹಾನಿಯಾಗಿರುತ್ತದೆ. ಇದರಿಂದ ಕೆಳಗೆ ಬಿದ್ದ ಬಾಲಕ ರಕ್ತ ಸ್ರಾವದಿಂದ ದುರ್ಮರಣಕ್ಕೀಡಾಗಿದ್ದಾನೆ. ತಂದೆ ಲಕ್ಷ್ಮಣಬಾಬು ವಿರುದ್ಧ ಪುತ್ರನ ಹತ್ಯೆ ಆರೋಪ ವ್ಯಕ್ತವಾಗಿದೆ. ಮೊಳಕಾಲ್ಮೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


3 Comments
Betano https://betanogame.org/de/ begrüßt Gewinner. Erhalte 100% bis zu €500 plus Freispiele bei deiner ersten Einzahlung. Genieße das flüssigste Casino-Erlebnis mit Top-Sicherheit und schnellem Support. Jetzt spielen.
Mostbet – onde as boas-vindas sГЈo tГЈo boas quanto os jogos – https://mostbetpt.pro/bonus/ , +125% no depГіsito + 250 rodadas grГЎtis – Mostbet faz acontecer .
Spin into a world where anything is possible – http://calcitriolc.com/mostbet-casino-analise-completa-2026-do-especialista-em-igaming/ , The casino’s heartbeat synced to your mouse clicks .