ಬೆಳಗಾವಿ, ಡಿ.13- ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರ ನಂತರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಕುರಿತಂತೆ ಮಾತನಾಡಿದ ಬಿ.ವೈ.ವಿಜಯೇಂದ್ರ,ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರ ಅನುಕರಣೆಯ ಮೂಲಕ ಗಮನಸೆಳೆದರು.
ರಾಜ್ಯದಲ್ಲೂ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ 50 ವರ್ಷದಲ್ಲಿ ಕಂಡು ಕೇಳದ ಬರಗಾಲ ಬಂದಿದ್ದು ತಕ್ಷಣವೇ ರೈತರು ಜನಸಾಮಾನ್ಯರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದ ಅವರ ಮಾತಿನ ಶೈಲಿ ಹಾಗೂ ಸರ್ಕಾರದ ವಿರುದ್ಧದ ಟೀಕೆಯಲ್ಲಿ ಯಡಿಯೂರಪ್ಪ ಅವರ ಅನುಕರಣೆ ಎದ್ದು ಕಾಣುತ್ತಿತ್ತು.
ಭಾಷಣದುದ್ದಕ್ಕೂ ಸರ್ಕಾರದ ಕಾರ್ಯವೈಖರಿ ಟೀಕಿಸುತ್ತಲೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೇತೃತ್ವದ ಸರ್ಕಾರ ನೀಡಿದ್ದ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಅಂದಿನ ಸರ್ಕಾರದೊಂದಿಗೆ ಇಂದಿನ ಸರ್ಕಾರವನ್ನು ಸಮೀಕರಿಸಿ ಮಾತನಾಡಿದ ಅವರು ಯಡಿಯೂರಪ್ಪ ನೇತೃತ್ವದ ಆಡಳಿತ ಕರ್ನಾಟಕದ ಪಾಲಿಗೆ ಸುವರ್ಣಯುಗದಂತಿತ್ತು ಎಂಬ ರೀತಿಯಲ್ಲಿ ಬಣ್ಣಿಸಿದರು.
ಭೀಕರ ಬರಗಾಲದಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಎಳೆ ಏಳೆಯಾಗಿ ಬಿಚ್ಚಿಡುತ್ತಾ ಬರದಿಂದ ತತ್ತರಿಸಿರುವ ರೈತರು ಸರ್ಕಾರದತ್ತ ಮುಖ ಮಾಡಿ ನೆರವಿಗಾಗಿ ಎದುರು ನೋಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಅನುಭವಿ ನಾಯಕರಲ್ಲಿ ಒಬ್ಬರಾಗಿದ್ದು ಎಸ್ ಎಂ ಕೃಷ್ಣ ನಂತರ ಒಂದು ಪೂರ್ಣಾವಧಿಗೆ ರಾಜ್ಯವನ್ನು ನಡೆಸಿದವರು ಮತ್ತು ಇದುವರೆಗೆ ದಾಖಲೆಯ 14 ಬಜೆಟ್ ಗಳನ್ನು ಮಂಡಿಸಿರುವ ಹೆಗ್ಗಳಿಕೆಯುಳ್ಳವರಾಗಿದ್ದು ರೈತರ ಸಂಕಷ್ಟ ಅರಿಯಬೇಕಿತ್ತು.ಆದರೆ ಹೀಗಾಗಲಿಲ್ಲ ಎಂದು ವಿಷಾದಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಸದನದಲ್ಲಿ ಬರಗಾಲ ಬಗ್ಗೆ ಚರ್ಚೆ ನಡೆಸಲು ಮುಂದಾದರೆ ಸರ್ಕಾರ ಅದಕ್ಕೆ ಸಿದ್ಧವಿದೆ ಎಂದು ಹೇಳಿದರು.ಇದನ್ನು ಸ್ವಾಗತಿಸಿ ಮಾತನಾಡಿದ ವಿಜಯೇಂದ್ರ ರೈತರು ಸಾಕಷ್ಟು ನಿರೀಕ್ಷೆಯಲ್ಲಿದ್ದು, ಅವರ ನೆರವಿನ ನಿರೀಕ್ಷೆಯನ್ನು ಹುಸಿ ಮಾಡಬೇಡಿ ಎಂದು ಹೇಳಿದರು.
ಹಿಂದಿನ ಮುಖ್ಯಮಂತ್ರಿ ರೈತ ನಾಯಕ ಯಡಿಯೂರಪ್ಪ ನವರು ಉತ್ತರ ಕರ್ನಾಟಕ ಭಾಗದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಚರ್ಚೆ ಅಭಿವೃದ್ಧಿಯು ಕಾಲಮಿತಿಯಲ್ಲಿ ನಡೆಯಬೇಕು ಎನ್ನುವ ಉದ್ದೇಶ ದಿಂದ ಸುವರ್ಣ ಸೌಧವನ್ನು ನಿರ್ಮಾಣ ಮಾಡಿದ್ದಾರೆ.ಅದರ ಸದುಪಯೋಗವಾಗಬೇಕಿದೆ ಎಂದರು.
ರಾಜ್ಯದಲ್ಲಿ ಸುಮಾರು 60 ರಿಂದ 80 ಮೆಟ್ರಿಕ್ ಟನ್ ಭತ್ತ, 40 ರಿಂದ 5೦ ಮೆಟ್ರಿಕ್ ಟನ್ ಜೋಳ,10 ಲಕ್ಷ ಮೆಟ್ರಿಕ್ ಟನ್ ತೊಗರಿ, ಕಬ್ಬು,ದ್ರಾಕ್ಷಿ ಬೆಳೆಯುವ ರೈತರಿದ್ದಾರೆ. ಎಲ್ಲವು ಬರಗಾದಿಂದ ಸಂಪೂರ್ಣವಾಗಿ ಬೆಲೆ ನಾಶವಾಗಿದೆ. ವಿದ್ಯುತ್ ಅಭಾವದಿಂದ ಬೋರ್ ವೆಲ್ ನೀರು ಹರಿಸಲಾಗದೆ ತೊಂದರೆಗೆ ಸಿಲುಕಿದ್ದಾರೆ ಎಂದು ಗಮನ ಸೆಳೆದರು.
ರಾಜ್ಯದ ಜನತೆ ಹೊಸ ಸರ್ಕಾರದ ಮೇಲೆ ಸಾಕಷ್ಟು ಭರವಸೆ ಇಟ್ಟಿದ್ದರು ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ, ಸಾಲ ವಸೂಲಾತಿಗೆ ತಡೆ ನೀಡಿ ಹೊಸ ಸಾಲ ನೀಡಲಿದೆ ಎಂಬ ನಿರೀಕ್ಷೆ ಇತ್ತು ಆದರೆ ಎಲ್ಲವೂ ಹುಸಿಯಾಗಿದೆ ಎಂದು ಆಪಾದಿಸಿದರು.


3 Comments
Особенно можно применять фонофорез при проблемах с суставами, так,
чтобы процедура усиливает кровообращение, как
следствие, в тканях.
Here is my webpage: https://muzkartalygb.ru/allergiya-v-detskom-sadu.html
Putting my first-hand opinion on that gaming site. I outline casino promos, financial side, and total experience. Discussing mostly promotions and processing time. Explaining how the gameplay responds and sends money. Highlighting main takeaways I’ve noticed. Writing about what I enjoyed and what didn’t impress me. You can learn more by checking out the full article Crowngreen
Greate pieces. Keep posting such kind of information on your page.
Im really impressed by your site.
Hello there, You’ve performed an incredible job.
I will certainly digg it and in my opinion recommend to my friends.
I am confident they’ll be benefited from this site.