ಮೈಸೂರು,ಡಿ. 23- ಸಂಸತ್ ಭವನದ ಭದ್ರತಾ ಕೋಟೆ ಉಲ್ಲಂಘಿಸಿ ಸದಮದೊಳಗೆ ಸ್ಮೋಕ್ ಕ್ಯಾನ್ ತೆರೆದು ಆತಂಕ ಸೃಷ್ಟಿಸಿದ ಆರೋಪದಲ್ಲಿ ಬಂಧಿತ ಮನೋರಂಜನ್ (Manoranjan) ಮೈಸೂರಿನಲ್ಲಿ ತನ್ನ ಸ್ವಂತ ಮನೆ ಇದ್ದರೂ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ಅಂಶ ಬೆಳಕಿಗೆ ಬಂದಿದೆ.
ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಈ ಕುರಿತಂತೆ ಮಾಹಿತಿ ಸಂಗ್ರಹಿಸಿದೆ.
ಮನೋರಂಜನ್ ಸ್ನೇಹಿತರು ಬಾಡಿಗೆಗೆ ರೂಮ್ ಬುಕ್ ಮಾಡಿರುವ ವಿಚಾರವನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು, ಮನೋರಂಜನ್ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಮನೋರಂಜನ್ ನಗರದಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರದ ಬಗ್ಗೆ ಆತನ ಪೋಷಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವನ್ನೇ ಪಡೆಯುತ್ತಿರಲಿಲ್ಲ. ಅದಕ್ಕೆ ಹೇಗೆ ಹಣ ಹೊಂದಿಸುತ್ತಿದ್ದ ಎಂಬುದು ತಿಳಿದಿಲ್ಲ ಎಂದು ಆತನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮನೋರಂಜನ್ ಆಗಾಗ ದೆಹಲಿಗೆ ತೆರಳಲು ಆತನಿಗೆ ಹಣ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಇತ್ತೀಚೆಗಷ್ಟೇ ತನಿಖೆ ಆರಂಭಿಸಿದ್ದರು. ಆದರೆ ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿರಲಿಲ್ಲ. ಇದೀಗ, ಮನೋರಂಜನ್ ಮೈಸೂರಿನಲ್ಲಿ ರೂಮ್ ಬಾಡಿಗೆಗೆ ಪಡೆಯಲು ಹಣ ಹೇಗೆ ಹೊಂದಿಸುತ್ತಿದ್ದ ಎಂಬುದು ಕುತೂಹಲ ಮೂಡಿಸಿದೆ.
ಕಳೆದ ಡಿ.3 ರಂದು ಮನೋರಂಜನ್, ಸಾಗರ್ ಶರ್ಮಾ ಮತ್ತು ಇತರ ಆರೋಪಿಗಳು ಸಂಸತ್ ಭವನದ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು. ಕೆಲ ಆರೋಪಿಗಳು ಸಂಸತ್ ಭವನದ ಹೊರಗೆ ಪ್ರತಿಭಟನೆ ಮತ್ತು ದಾಳಿ ನಡೆಸಿದ್ದರೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಲೋಕಸಭೆಯ ಒಳ ನುಗ್ಗಿ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು. ಘಟನೆಯ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.


3 Comments
online pharmacy vicodin es generic valtrex online pharmacy escitalopram oxalate online pharmacy
remote consultation online pharmacy triamcinolone cream online pharmacy online pharmacy vicodin es
tadalafil cost walmart vardenafil vs tadalafil vs sildenafil bluechew tadalafil