ಗೀತ ಗೋವಿಂದಂ’ ಫೇಮ್ ನಂತರದಲ್ಲಿ ನಿರ್ದೇಶಕ ಪರಶುರಾಮ್ ಅವರ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕಾಗಿ ಮಹೇಶ್ ಬಾಬು ಜತೆ ಕೈ ಜೋಡಿಸಿದರು. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಹಾಸ್ಯದ ರಸದೌತಣ ನೀಡಿದ್ದ ಅವರು ಇಲ್ಲಿಯೂ ಅದೇ ತಂತ್ರ ಬಳಕೆ ಮಾಡಿಕೊಂಡಿದ್ದಾರೆ.
ಚಿತ್ರದ ಮೊದಲಾರ್ಧ ಪೂರ್ತಿ ಫನ್ನಿಯಾಗಿಯೇ ಸಾಗುತ್ತದೆ. ನೋಡುಗನಿಗೆ ನಗು ಉಕ್ಕಿಸುತ್ತದೆ. ಆದರೆ, ಮೊದಲಾರ್ಧದ ಕಥೆಗೂ ದ್ವಿತೀಯಾರ್ಧದ ಕಥೆಗೂ ಸಂಬಂಧವಿಲ್ಲ. ಎಲ್ಲೆಲ್ಲೋ ಸುತ್ತಾಡಿ ನಿರ್ದೇಶಕರು ಮುಖ್ಯ ಕಥೆಗೆ ಬಂದಿದ್ದಾರೆ. ದ್ವಿತೀಯಾರ್ಧ ಕೊಂಚ ನಿಧಾನ ಎಂದೂ ಪ್ರೇಕ್ಷಕನಿಗೆ ಅನಿಸುತ್ತದೆ.
ನಿರ್ದೇಶಕ ಪರಶುರಾಮ್ ಹೇಳ ಹೊರಟಿರುವ ವಿಷಯ ನಿಜಕ್ಕೂ ಸಾಮಾನ್ಯರಿಗೆ ಕನೆಕ್ಟ್ ಆಗುವಂತಹದ್ದು. ಆದರೆ, ಅದನ್ನು ಪ್ರೆಸೆಂಟ್ ಮಾಡುವ ವಿಚಾರದಲ್ಲಿ ಅವರು ಎಡವಿದ್ದಾರೆ. ಫಿಸಿಕ್ಸ್ ಹಾಗು ಲಾಜಿಕ್ ಇಲ್ಲದೆ ಅವರು ಹೇಳುವ ಕಥೆ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ. ಸಿನಿಮಾ ಅದ್ದೂರಿಯಾಗಿಯೇ ಮೂಡಿ ಬಂದಿದೆ. ಆದರೆ, ಕಥೆಗೆ ಒಳ್ಳೆಯ ಮೇಕಪ್ ಸಿಕ್ಕಿಲ್ಲ.
ಮಹೇಶ್ ಬಾಬು ಅವರು ಭಿನ್ನ ಮ್ಯಾನರಿಸಂನಲ್ಲಿ ಮಿಂಚಿದ್ದಾರೆ. ಹಿಂದೆಂದೂ ಮಾಡಿರದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದು ಅವರ ಫ್ಯಾನ್ಸ್ಗೆ ನಿಜಕ್ಕೂ ಹಬ್ಬವೇ ಸರಿ. ಮಾಸ್ ಆ್ಯಕ್ಷನ್ ಮೂಲಕ ಅವರು ಗಮನ ಸೆಳೆಯುತ್ತಾರೆ. ‘ಕಲಾವತಿ..’, ‘ಪೆನ್ನಿ..’ ಹಾಡುಗಳಲ್ಲಿ ಅವರ ಡ್ಯಾನ್ಸ್ ಇಷ್ಟವಾಗುತ್ತದೆ. ಸಿನಿಮಾದ ಆರಂಭದಲ್ಲಿ ಬರುವ ಫೈಟ್ ಸೀನ್ ಉತ್ತಮವಾಗಿದೆ. ಬೀಚ್ ಪಕ್ಕ ನಡೆಯುವ ಫೈಟ್ ದೃಶ್ಯಗಳಲ್ಲಿ ಲಾಜಿಕ್ ಬಗ್ಗೆ ಗಮನ ಹರಿಸದಿದ್ದರೆ ಎಂಜಾಯ್ ಮಾಡಬಹುದು. ‘ಕಲಾವತಿ..’, ‘ಪೆನ್ನಿ..’ ಹಾಡುಗಳು ಇಷ್ಟವಾಗುತ್ತದೆ. ಎಸ್. ಥಮನ್ ಅವರು ಸಂಗೀತ ಹಾಗು ಹಿನ್ನೆಲೆ ಸಂಗೀತದ ಮೂಲಕ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಕೀರ್ತಿ ಸುರೇಶ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಮುದ್ರಖಣಿ ವಿಲನ್ ಆಗಿ ಗಮನ ಸೆಳೆಯುತ್ತಾರೆ. ಕಿಶೋರ್, ಸುಬ್ಬರಾಜು ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ.
Previous Articleಮಾರ್ಷ್-ವಾರ್ನರ್ ಅಬ್ಬರಕ್ಕೆ ಮಂಕಾದ ರಾಜಸ್ಥಾನ ರಾಯಲ್ಸ್
Next Article ಹಸೆಮಣೆಯಿಂದ ಸೀದಾ exam ಹಾಲ್ ಗೆ