Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಯತ್ನಾಳ್ ಅ’ಸಂತೋಷ’ದ ಹಿಂದಿನ‌ ರಹಸ್ಯ | Yatnal
    ಸುದ್ದಿ

    ಯತ್ನಾಳ್ ಅ’ಸಂತೋಷ’ದ ಹಿಂದಿನ‌ ರಹಸ್ಯ | Yatnal

    vartha chakraBy vartha chakraDecember 27, 2023No Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಡಿ.27: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವಿಜಯೇಂದ್ರ ಅವರನ್ನು ನೇಮಕ ಮಾಡಿದಾಗಿನಿಂದ ನಾಯಕತ್ವದ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ (Yatnal) ಅವರಿಗೆ ಪಕ್ಷದ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರಾದ ಆಶೀರ್ವಾದ ಇರುವುದು ಬೆಳಕಿಗೆ ಬಂದಿದೆ.
    ನೆನೆಗುದಿಗೆ ಬಿದ್ದಿದ್ದ ಪಕ್ಷದ ಅಧ್ಯಕ್ಷ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ನೇಮಕ ಆದೇಶ ಹೊರಬೀಳುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ್ ತೀರ್ಮಾನದ ವಿರುದ್ಧ ಸಮರ ಘೋಷಣೆ ಮಾಡಿದ್ದರು.

    ವಿಧಾನಸಭೆ ಪ್ರತಿಪಕ್ಷ ನಾಯಕ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸಹಕಾರವಿತ್ತು.ಅವರು ಹೈಕಮಾಂಡ್ ಮಟ್ಟದಲ್ಲಿ ಇವರ ಪರವಾಗಿ ಲಾಬಿ‌ ಕೂಡ ಮಾಡಿದ್ದರು. ಆದರೆ ಇದರ ನಡುವೆ ಯಡಿಯೂರಪ್ಪ ಅವರು ಉರುಳಿಸಿದ ದಾಳದ ಮುಂದೆ ಸಂತೋಷ್ ಅವರ ಲಾಬಿ ಕೆಲಸ ಮಾಡದೆ ನೇಮಕ ಆದೇಶ ಹೊರಬಿದ್ದಿದ್ದವು.

    ಈ ಆದೇಶ ಹೊರಬೀಳುತ್ತಿದ್ದಂತೆ ಕಿಡಿಕಿಡಿಯಾದ ಯತ್ನಾಳ್,ವಿಧಾನಸಭೆಯ ಒಳಗೆ ಮತ್ತು ಹೊರಗೆ ನೂತನ ನಾಯಕರ ವಿರುದ್ಧ ಕಿಡಿ ಕಾರುವ ಮೂಲಕ ನಾಯಕತ್ವವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿದರು.
    ಪದೇ ಪದೇ ನಾಯಕತ್ವ ವಿರುದ್ಧ ಇವರು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕೆಲವು ಜಿಲ್ಲಾ ಘಟಕಗಳು ರಾಜ್ಯ ಸಮಿತಿಗೆ ಪತ್ರ ಬರೆದಿವೆ.
    ಇದರ ಆಧಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ದೆಹಲಿಗೆ ತೆರಳಿ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಹೊತ್ತಿರುವ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಯತ್ನಾಳ್ ವಿರುದ್ಧ ಮೌಖಿಕವಾಗಿ ದೂರು ನೀಡಿದ್ದಾರೆ. ಯತ್ನಾಳ್ ಅವರ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸದೆ ಹೋದರೆ ಪಕ್ಷದ ನಾಯಕತ್ವ ಕರ್ನಾಟಕದಲ್ಲಿ ಪದೇ ಪದೇ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಆದರೆ ಹೈಕಮಾಂಡ್ ಈ ದೂರಿನ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಇದಕ್ಕೆ ಪ್ರಮುಖ ಕಾರಣ ಯತ್ನಾಳ್ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಇರುವ ಆಶೀರ್ವಾದ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಯತ್ನಾಳ್ ಅವರ ಪರವಾಗಿದ್ದು, ಯಾವುದೇ ಕ್ರಮಕ್ಕೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಇದಿಷ್ಟೇ
    ಅಲ್ಲದೆ ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಪ್ರಹಾರ ನಡೆಸಲು ಚಿತಾವಣೆ ಮಾಡುತ್ತಿದ್ದಾರೆ ಎಂಬ ದೂರು ಸಹ ಕೇಳಿ ಬಂದಿದ್ದು ವಿದ್ಯಮಾನಗಳು ಕುತೂಹಲ ಮೂಡಿಸಿವೆ.

     

    ALSO READ | Latest Kannada News | News In Kannada

    ಹೈಕಮಾಂಡ್ ಗೆ ಸವಾಲ್ ಹಾಕಿದ ಯತ್ನಾಳ್ | Yatnal

    Verbattle
    Verbattle
    Verbattle
    #kannada art kannada news m News Varthachakra Yatnal ಕಾರು
    Share. Facebook Twitter Pinterest LinkedIn Tumblr Email WhatsApp
    Previous Articleಕಲ್ಲಡ್ಕ ಪ್ರಭಾಕರ ಭಟ್ ರನ್ನು ರೌಡಿ ಪಟ್ಟಿಗೆ ಸೇರಿಸಿ | Kalladka Prabhakar Bhat
    Next Article ಕನ್ನಡ ನಾಮಫಲಕಕ್ಕಾಗಿ ಹೋರಾಟ | Kannada Rakshana Vedike
    vartha chakra
    • Website

    Related Posts

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    February 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    February 20, 2026

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    February 20, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • gotovye_tfet on ಶನಿವಾರkpcc ಕಚೇರಿಗೆ ಸಿಎಂ ಬರುತ್ತಾರೆ.
    • Stephenhob on ಧರ್ಮಸ್ಥಳ ಪ್ರಕರಣಕ್ಕೆ ಹಠಾತ್ ತಿರುವು.
    • SandraDrelt on ಅಂತಾರಾಜ್ಯ pistol ಮಾರಾಟ ಜಾಲ ಪತ್ತೆ
    Latest Kannada News

    ಬಡವರ ಗ್ಯಾರಂಟಿ Vs ಶ್ರೀಮಂತರ ರಿಯಾಯಿತಿ: ನ್ಯಾಯ ಯಾರ ಪರ?

    February 20, 2026

    ಎದ್ದು ನಿಂತ ಪಬ್ಲಿಕ್ ಟಿವಿ , ಕುಸಿದು ಬಿದ್ದ ಟಿವಿ9..!

    February 20, 2026

    ಇನ್ ಸೈಟ್ ಐಎಎಸ್ ನ ಮಾದರಿ ನಡೆ

    February 20, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.