Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದಿಢೀರ್ ಹಣ ಗಳಿಸಲು ಪಿಂಪ್ ಆದ ಸಾಪ್ಟ್ ವೇರ್ ಇಂಜಿನಿಯರ್ | Prostitution
    Viral

    ದಿಢೀರ್ ಹಣ ಗಳಿಸಲು ಪಿಂಪ್ ಆದ ಸಾಪ್ಟ್ ವೇರ್ ಇಂಜಿನಿಯರ್ | Prostitution

    vartha chakraBy vartha chakraJanuary 12, 2024Updated:January 12, 202427 Comments2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು, ಜ.11- ಟರ್ಕಿ ಮೂಲದ ಮಹಿಳೆ,ವಿದೇಶಿ ಮಹಿಳೆಯರನ್ನು ಇಟ್ಟುಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಅಚ್ಚರಿಯ ಅಂಶವೊಂದನ್ನು‌ ಪತ್ತೆ ಹಚ್ಚಿದ್ದಾರೆ.
    ತಾನು ಮಾಡುತ್ತಿದ್ದ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಸಂಬಳ ದೊರೆಯುತ್ತಿದ್ದರೂ,ಭಾರಿ ಮೊತ್ತದ ಹಣ ಗಳಿಸುವ ಹುಚ್ಚಿಗೆ ಬಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಈ ಪ್ರಕರಣದಲ್ಲಿ ಪಿಂಪ್‌ ಆಗಿ ಕೆಲಸ ಮಾಡುತ್ತಿದ್ದ ಅಂಶ ಬಯಲಿಗೆ ಬಂದಿದೆ.
    ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಗೋವಿಂದರಾಜು
    ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತ ವಿದೇಶಿ ಮಹಿಳೆಯರ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.

    ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗೆ ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಈತ ಷೇರು ಮಾರ್ಕೆಟ್ ಚಟಕ್ಕೆ ಬಿದ್ದಿದ್ದ. ತಾನು ದುಡಿದ ಅಷ್ಟೂ ಹಣವನ್ನು ಷೇರುಗಳಿಗೆ ಸುರಿಯುತ್ತಿದ್ದ. ಇವೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಗಿತ್ತು.
    ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತಿಂಗಳ ಸಂಬಳ ಸಾಕಾಗದೆ ಸಾಲ ಮಾಡಬೇಕಾಗಿತ್ತು. ಇದರಿಂದ ಕೈಗೆ ಬಂದ ಸಂಬಳ ಮಾಡಿದ ಸಾಲ ತೀರಿಸಲು  ಸರಿ ಹೋಗುತ್ತಿತ್ತು.

    ಈ ಸಂದರ್ಭದಲ್ಲಿ ತನ್ನ ಕಮ್ಯೂನಿಕೇಷನ್‌ಗೆ ಎಂದು ಒಂದು ಆ್ಯಪ್ ಸೃಷ್ಟಿಸಿಕೊಂಡಿದ್ದ. ಮೊದ ಮೊದಲು ಗೆಳೆಯರ ಜೊತೆ ಸಂವಹನ ಮಾಡಲು ಬಳಕೆಯಾಗ್ತಿತ್ತು. ಈ ವೇಳೆ ಮತ್ತೊಬ್ಬ ಬಿಇ ಪದವೀಧರ ವೀಝಾಕ್ ಎಂಬಾತ ಗೋವಿಂದರಾಜುವಿಗೆ ವೇಶ್ಯಾವಾಟಿಕೆಯಲ್ಲಿ ಹಣವಿದೆ, ಅದರಲ್ಲೂ ವಿದೇಶಿ ಮಹಿಳೆಯರಿಗೆ ಒಳ್ಳೆಯ ಬೆಲೆ ಇದೆ ಎಂದು ತಲೆಗೆ ತುಂಬಿಸಿದ್ದ.‌
    ಟೆಕ್ಕಿ ಸೃಷ್ಟಿ ಮಾಡಿರುವ ಆ್ಯಪ್ ತುಂಬಾ ಸೆಕ್ಯೂರ್ ಆಗಿರುವ ಪ್ರೈವೇಟ್ ಆಪ್ ಆಗಿದ್ದು, ಅದರಲ್ಲಿ ತಮಗೆ ಬೇಕಾದವರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದ. ಟೆಕ್ಕಿಯಾಗಿದ್ದ ವೇಳೆ ಸಿಗದಿದ್ದ ಹಣ ಈ ಆ್ಯಪ್‌ ಮೂಲಕ ಸಿಗುತ್ತಿತ್ತು. ಹೀಗೆ ಸಂಪರ್ಕಕ್ಕೆ ಬಂದವಳೇ ಪುಲಕೇಶಿನಗರದಲ್ಲಿ ವಾಸವಾಗಿರುವ ಟರ್ಕಿ ದೇಶದ ಮಹಿಳೆ ಬಿಯೋನಾಜ್ (39).
    ಈಕೆ ಟರ್ಕಿಯಿಂದ ಬಂದವಳಾಗಿದ್ದು 15 ವರ್ಷದ ಹಿಂದೆ ಪ್ರವಾಸಿ ವೀಸಾದಲ್ಲಿ ಬಂದಿದ್ದ ಆಕೆಯು ಸ್ಥಳೀಯ ನಿವಾಸಿ ಸೆಲ್ವ ಎಂಬುವರನ್ನು ಮದುವೆಯಾಗಿದ್ದರು.ದಂಪತಿಗೆ ಒಂದು ಮಗು ಕೂಡ ಇದೆ.

    ಪತಿ ಸೆಲ್ವನಿಗೆ ಕ್ಷಯರೋಗ ಕಾಣಿಸಿಜೊಂಡು ಅದು ಹೆಚ್ಚಾಗುತ್ತಿದ್ದಂತೆ ಬಿಯಾನಾಜ್ ದೂರವಾಗುವ ಸೂಚನೆ ಸಿಕ್ಕಿತ್ತು.‌ ಇದನ್ನರಿತ ಸೆಲ್ವ, ಬಿಯನಾಜ್ ಳ ಟರ್ಕಿ ಪಾಸ್‌ಪೋರ್ಟನ್ನು ಹರಿದು ಹಾಕಿದ್ದ. ಭಾರತದ ಪಾಸ್‌ಪೋರ್ಟ್ ಕೂಡ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಅದೂ ಅಲ್ಲದೆ ಮಗ ಇಲ್ಲೇ ಹುಟ್ಟಿದ ಕಾರಣ ಆತ ಈ ದೇಶದ ನಾಗರಿಕನಾಗಿದ್ದಾನೆ.
    ಹೀಗಾಗಿ ಇಲ್ಲೇ ಉಳಿದ ಈಕೆ ಹೈಟೆಕ್ ವೇಶ್ಯಾವಾಟಿಕೆಗೆ ಇಳಿದಿದ್ದಳು. ಕಳೆದ 10 ವರ್ಷದಿಂದ ಈಕೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಿಯಾನಾಜ್ ಹಾಗೂ ಆಕೆಯ ಸಹಚರರಾದ ಒಡಿಶಾ ಮೂಲದ ಜಿತೇಂದ್ರ ಸಾಹೂ (43), ಪ್ರಮೋದ್ ಕುಮಾರ್ (31), ಮನೋಜ್ ದಾಸ್ (23) ಅಸ್ಸಾಂ ಮೂಲದ ಸೌಮಿತ್ರ ಚಂದ್ (26), ಮಹಾಲಕ್ಷ್ಮಿ ಲೇಔಟ್ ನಿವಾಸಿ ಪ್ರಕಾಶ್ (32), ಲಗ್ಗೆರೆಯ ವೇಶಾಕ್(22), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್ (34) ಮತ್ತು ನಂದಿನಿ ಲೇಔಟ್ ನಿವಾಸಿ ಅಕ್ಷಯ್ (32) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ 7 ವಿದೇಶಿ ಮಹಿಳೆಯರು ಸೇರಿ ಒಟ್ಟು 9 ಮಂದಿಯನ್ನು ರಕ್ಷಿಸಲಾಗಿದೆ.

    Verbattle
    Verbattle
    Verbattle
    prostitution ಮದುವೆ
    Share. Facebook Twitter Pinterest LinkedIn Tumblr Email WhatsApp
    Previous Articleರಾಮಮಂದಿರ ಉದ್ಘಾಟನೆಯಂದು ಮದ್ಯ ನಿಷೇಧ! | Ram Mandir
    Next Article ಶಂಕರಾಚಾರ್ಯರು ಯಾಕೆ ಹೀಗೆ ಹೇಳಿದರು? | Shankaracharya
    vartha chakra
    • Website

    Related Posts

    ಸತ್ತವಳು ಎದ್ದು ಬಂದಾಗ!

    February 15, 2026

    ಬೀದಿನಾಯಿಯಿಂದ ‘ಶಾಂತಿದೂತ’ನಾದ ಅಲೋಕಾನ ಅಚ್ಚರಿಯ ಕಥೆ!

    January 27, 2026

    Alcohol ಇಲ್ಲದೆ ಪಾರ್ಟಿ ನಡೆಯುತ್ತಾ?

    January 5, 2026

    Leave A Reply Cancel Reply

    Verbattle
    Categories
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • Election
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • Bengaluru
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    ಕಾಂಗ್ರೆಸ್ ಶಾಸಕ ಅನರ್ಹ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix on ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ
    • LinwoodGah on ಬಲೆಗೆ ಬಿದ್ದ ಡ್ರಗ್ ಫೆಡ್ಲರ್ ಗಳು
    • Louisref on BJP ಟಿಕೆಟ್ ವಂಚನೆ- ಚೈತ್ರಾ ಕುಂದಾಪುರ ತಪ್ಪೊಪ್ಪಿಗೆ! | Chaitra Kundapura
    Latest Kannada News

    ಅಮೆರಿಕಾದಲ್ಲಿ ಕನ್ನಡಿಗ ವಿದ್ಯಾರ್ಥಿಯ ಸಾವಿಗೆ ಒತ್ತಡವೇ ಕಾರಣವಾಯಿತೇ?

    February 17, 2026

    ದರೋಡೆಯಾದ 400 ಕೋಟಿ ಎಲ್ಲಿಗೆ ಹೋಯಿತು..?

    February 17, 2026

    ಕಾಂಗ್ರೆಸ್ ಶಾಸಕ ಅನರ್ಹ

    February 17, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • Bengaluru
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.