KYC ಪೂರ್ಣಗೊಳಿಸದ ವಾಹನ ಮಾಲೀಕರ FASTag ಖಾತೆಯನ್ನು ನಿರ್ಬಂಧಿಸಲಾಗುವುದು ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ NHAI ತಿಳಿಸಿದೆ. ಈಗಾಗಲೇ ಒಂದು ವಾಹನಕ್ಕೆ ಹಲವು FASTag ಗಳು ಒಂದೇ FASTag ಅನ್ನು ಹಲವು ವಾಹನಗಳಿಗೆ ಬಳಸುವುದು ಹೀಗೆಲ್ಲ ನಡೆಯುತ್ತಿರುವುದರಿಂದ ಮತ್ತು ಆ ಕಾರಣದಿಂದಾಗಿ ಟೋಲ್ ಪ್ಲಾಜಾ ಗಳಲ್ಲಿ ಬಹಳಷ್ಟು ಸಮಸ್ಯೆಗಳೂ ಉಂಟಾಗಿರುವುದರಿಂದ ಕೇಂದ್ರ ಸಂಚಾರ ಸಚಿವಾಲಯ ಈ ನಿರ್ದೇಶನ ನೀಡಿದೆ.
ಇನ್ನು ಮುಂದೆ ಒಂದು ವಾಹನಕ್ಕೆ ಒಂದು FASTag ಎಂಬ ನೀತಿಯನ್ನು ಅನುಸರಿಸಲಾಗುವುದು ಮತ್ತು ವಾಹನ ಮಾಲೀಕರು ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದೂ ಸೂಚನೆ ನೀಡಲಾಗಿದೆ. ಒಂದೇ FASTag ಅನ್ನು ಹಲವು ವಾಹನಗಳಿಗೆ ಬಳಸುವವರು ಆ FASTag ಚೀಟಿಯನ್ನು ವಾಹನದ ಗಾಜಿಗೆ ಅಂಟಿಸಿರುವುದಿಲ್ಲ ಆದ್ದರಿಂದ ಸರಾಗವಾಗಿ ಟೋಲ್ ಗಳಲ್ಲಿ ವಾಹನಗಳ ಚಲನೆಯಾಗದೆ ಇತರರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಈ ಕ್ರಮ ಕೈಗೊಳ್ಳಲಿಕ್ಕೆ ಅದೂ ಒಂದು ಕಾರಣ ಎಂದು ಹೇಳಾಲಾಗಿದೆ.
ಜನವರಿ 31ರ ನಂತರ FASTag ಅಕೌಂಟ್ ನಲ್ಲಿ ಹಣವಿದ್ದರೂ ಕೂಡ ಸಂಪೂರ್ಣ KYC ಮಾಡದ ವಾಹನಗಳ FASTag ಅನ್ನು ನಿಷ್ಕ್ರಿಯ ಮಾಡಲಾಗುವುದು ಎಂದೂ ಪ್ರಾಧಿಕಾರ ಚೇತಾವಣೆ ನೀಡಿದೆ.