ನ್ಯೂಝಿಲ್ಯಾಂಡ್ ನ (New Zealand) ಸಂಸತ್ತಿನ ಸದಸ್ಯೆಯಾಗಿರುವ ಗೋಲ್ರಿಜ್ ಘಾರಮನ್ ಅವರು ಇತ್ತೀಚಿನ ದಿನಗಳಲ್ಲಿ ಮೂರು ಅಂಗಡಿಗಳಿಂದ ವಸ್ತುಗಳನ್ನು ಕದ್ದ ಆರೋಪವನ್ನು ಎದುರಿಸುತ್ತಿರುವುದರಿಂದ ಅವರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದು ಪ್ರತಿಷ್ಠಿತ ಅಂಗಡಿಯಿಂದ ಒಂದು ಡಿಸೈನರ್ ಬ್ಯಾಗ್ ಅನ್ನು ಕದ್ದಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದು ಹೊರಬಿದ್ದಮೇಲೆ ಗೋಲ್ರಿಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
೪೨ ವಯಸ್ಸಿನ ಗೋಲ್ರಿಜ್ ನ್ಯೂಝೀಲ್ಯಾನ್ಡ್ ದೇಶದ ಸಂಸತ್ತಿಗೆ ಆಯ್ಕೆಯಾದಾಗ ಅವರು ಆ ದೇಶಕ್ಕೆ ವಲಸೆ ಬಂದು ಅಂಥಾ ಸಾಧನೆ ಮಾಡಿದ ಪ್ರಥಮ ಮಹಿಳೆಯಾಗಿ ಗುರುತಿಸಲ್ಪಟ್ಟರು. ಆದರೆ ಈಗ ಕಳ್ಳತನದ ಆರೋಪ ಹೊತ್ತಿರುವ ಗೋಲ್ರಿಜ್ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲವಾದರೂ ಅವರು ವಿಪರೀತ ಟೀಕೆಗಳಿಗೆ ಒಳಗಾಗಿದ್ದಾರೆ. ಗೋಲರಿಜ್ ಅವರು ರಾಜೀನಾಮೆ ನೀಡುವಾಗ ಕೊಟ್ಟ ಹೇಳಿಕೆಯಲ್ಲಿ ತಾವು ಸಾರ್ವಜನಿಕ ಸೇವೆಯ ನಿರೀಕ್ಷೆಗಳಿಗೆ ಅನುಗುಣವಾಗಿ ನಡೆದುಕೊಂಡಿಲ್ಲ ಎನ್ನುವ ವಿಷಾದದೊಂದಿಗೆ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗೋಲ್ರಿಜ್ ಅವರು ತಮ್ಮ ಕುಟುಂಬದೊಂದಿಗೆ ಎಳೆ ವಯಸಿನ್ನಲ್ಲಿಯೇ ಇರಾನ್ ದೇಶ ಬಿಟ್ಟು ನ್ಯೂಝೀಲ್ಯಾನ್ಡ್ ದೇಶಕ್ಕೆ ಬಂದಿಳಿದರು. ಅವರು ಸಂಸತ್ತಿನಲ್ಲಿ ನ್ಯೂಝೀಲ್ಯಾನ್ಡ್ ದೇಶದ ಗ್ರೀನ್ ಪಾರ್ಟಿಯನ್ನು ಪ್ರತಿನಿಧಿಸುತ್ತಿದ್ದರು.
2 Comments
скорая наркологическая помощь москва скорая наркологическая помощь москва .
курс тенге рубль http://www.kursy-valut-online.kz .