ಬೆಂಗಳೂರು – ಲೋಕಸಭೆ Electionಗೂ ಮುನ್ನವೇ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಸಮರಕ್ಕೆ ವೇದಿಕೆ ಸಜ್ಜುಗೊಂಡಿದೆ.
ಏಪ್ರಿಲ್ 2 ರಂದು ನಿವೃತ್ತಿಯಾಗಲಿರುವ ಕರ್ನಾಟಕದ ರಾಜ್ಯಸಭಾ ಸದಸ್ಯರಾದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (ಬಿಜೆಪಿ), ಕಾಂಗ್ರೆಸ್ ಸದಸ್ಯರಾದ ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಸೈಯದ್ ನಸೀರ್ ಹುಸೇನ್ ಅವರ ಸ್ಥಾನಗಳಿಗೆ ಚುನಾವಣೆ ಘೋಷಿಸಲಾಗಿದೆ.
ವಿಧಾನಸಭೆಯಲ್ಲಿ ಹೊಂದಿರುವ ಪಕ್ಷಗಳ ಬಲಾಬಲಗಳನ್ನು ಆಧರಿಸಿ ನೋಡುವುದಾದರೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿಗೆ ಒಂದು ಸ್ಥಾನ ಲಭಿಸಲಿದೆ ಚುನಾವಣೆ ಸಂಬಂಧ ಮೂರು ಪಕ್ಷಗಳಲ್ಲಿ ಒಮ್ಮತ ಏರ್ಪಟ್ಟು ನಡೆದಿದ್ದೆ ಆದಲ್ಲಿ ಈ ಲೆಕ್ಕಾಚಾರ ಸಾಧ್ಯವಾಗಲಿದೆ.
ಇದನ್ನು ಹೊರತುಪಡಿಸಿ ಹೆಚ್ಚುವರಿ ಆಗಿರುವ ಜೆಡಿಎಸ್ ಮತಗಳನ್ನು ಲೆಕ್ಕಕ್ಕೆ ಇಟ್ಟುಕೊಂಡು ಬಿಜೆಪಿ ಅಥವಾ ಜೆಡಿಎಸ್ 5 ನೇ ಅಭ್ಯರ್ಥಿಯನ್ನು ಕೇಳಿಸಿದಲ್ಲಿ ಚುನಾವಣಾ ಅಖಾಡಕ್ಕೆ ಭರ್ಜರಿ ರಂಗು ಬರಲಿದೆ.
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಬಿಜೆಪಿಯ ರಾಜ್ಯನಾಯಕರ ಜೊತೆ ಮಾತುಕತೆ ನಡೆಸಿರುವುದು ವಿದ್ಯಮಾನಗಳಿಗೆ ರಂಗು ಬರುವಂತೆ ಮಾಡಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 8 ರಂದು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಲಿದ್ದು , ಅಂದಿನಿಂದ ಫೆ.15ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಫೆ. 16ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಫೆ.20 ಕಡೆ ದಿನ. ಅಗತ್ಯ ಬಿದ್ದರೆ ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಮತದಾನ ನಡೆಯಲಿದ್ದು , ಅಂದು ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಿಸಲಾಗುತ್ತದೆ.
ಆಡಳಿತ ರೂಢ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಗಾಗಿ ಪೈಪೋಟಿ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಸಿರ್ ಹುಸೇನ್ ಮರು ಆಯ್ಕೆ ಬಯಸಿದರೆ, ಗೃಹ ಮಂತ್ರಿ ಪರಮೇಶ್ವರ್ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಿ.ಸಿ. ಚಂದ್ರಶೇಖರ್ ಕೂಡ ಎರಡನೇ ಬಾರಿಗೆ ಆಯ್ಕೆಯಾಗಲು ಪೈಪೋಟಿ ನಡೆಸಿದ್ದಾರೆ
ಪರಿಶಿಷ್ಟ ಜಾತಿ ಎಡಗೈ ಕೋಟಾದಡಿ ಎರಡನೇ ಬಾರಿಗೆ ಅವಕಾಶ ಕೊಡುವ ನಿರೀಕ್ಷೆಯಲ್ಲಿದ್ದಾರೆ ಎಲ್ ಹನುಮಂತಯ್ಯ ಇದನ್ನು ಹೊರತುಪಡಿಸಿ ಪಕ್ಷದ ಹಿರಿಯ ನಾಯಕ ಮನ್ಸೂರ್ ಅಲಿ ಖಾನ್, ಬಿ ಎಲ್ ಶಂಕರ್, ಎಚ್. ಎಂ. ರೇವಣ್ಣ, ನಿವೇದಿತ ಆಳ್ವ, ಎಚ್ ಆಂಜನೇಯ ಸೇರಿದಂತೆ ಅನೇಕರು ಟಿಕೆಟ್ ಗಾಗಿ ಲಾಬಿ ನಡೆಸಿದ್ದಾರೆ.
ಬಿಜೆಪಿಯಿಂದ ಉದ್ಯಮಿ ಪ್ರಕಾಶ್ ಶೆಟ್ಟಿ ವಾಮನಾಚಾರ್ಯ ವಿ ಸೋಮಣ್ಣ ಟಿಕೆಟ್ ನಿರೀಕ್ಷಿಸಿದ್ದು ಮಂತ್ರಿಯಾಗಿರುವ ರಾಜೀವ್ ಚಂದ್ರಶೇಖರ್ ಮರು ಆಯ್ಕೆಯ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಮಾತ್ರ ಕೊಡುವಂತೆ ಕೇಳಿರುವ ಜೆಡಿಎಸ್ ರಾಜ್ಯಸಭೆಯ ಸ್ಥಾನವನ್ನು ತನಗೆ ಬಿಟ್ಟು ಕೊಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.