ಬೆಂಗಳೂರು – ಮೊಬೈಲ್ ಶಾಪ್ ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಲೋಕಸಭೆ Election ವೇಳೆ ರಾಜಕೀಯ ನುಸುಳಿದ ಈ ಪ್ರಕರಣದಲ್ಲಿ ಸುಮಾರು ನೂರು ಕೋಟಿ ರೂಪಾಯಿಗೂ ಅಧಿಕ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.
ತಪ್ಪು ಗ್ರಹಿಕೆ, ಅನಗತ್ಯ ವಿವಾದದ ಪರಿಣಾಮವಾಗಿ ಬೆಂಗಳೂರಿನ ಚಿಕ್ಕಪೇಟೆಯ Businessಿಗಳು ದೊಡ್ಡ ನಷ್ಟ ಅನುಭವಿಸಿದರು.
ಬೆಂಗಳೂರಿನ ಹಳೆಯ ವಾಣಿಜ್ಯ ಪ್ರದೇಶ ನಗರ್ತಪೇಟೆಯಲ್ಲಿನ ಮೊಬೈಲ್ ಅಂಗಡಿ ಮಾಲೀಕ ಮುಕೇಶ್ ಜೋರು ಸೌಂಡ್ ಇಟ್ಟು ಹಾಡು ಹಾಕುತ್ತಿದ್ದರು.ಅಕ್ಕಪಕ್ಕದ ಹುಡುಗರು ಮುಕೇಶ್ ಗೆ ಜೋರು ಸೌಂಡ್ ನಲ್ಲಿ ಹಾಡು ಹಾಕಬೇಡ ಎಂದಿದ್ದರು. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಅವರ ಕೊರಳ ಪಟ್ಟಿ ಹಿಡಿದು, ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದರು
ಗಾಯಗೊಂಡ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರುಗೇಟ್ ಪೊಲೀಸರು ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಇದಾದ ನಂತರ ಈ ಪ್ರಕರಣ ಬೇರೆ ಸ್ವರೂಪ ಪಡೆಯಿತು.ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಮುಕೇಶ್ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದರು. ಮೊಬೈಲ್ ಅಂಗಡಿ ಪಕ್ಕದಲ್ಲಿ ಮಸೀದಿಯಿದೆ.ಇಲ್ಲಿ ನಮಾಝ್ ಮಾಡುವವರಿಗೆ ಜೋರು ಧ್ವನಿಯಲ್ಲಿ ಹನುಮಾನ್ ಚಾಲೀಸ ಹಾಕುವುದರಿಂದ ತೊಂದರೆಯಾಗುತ್ತದೆ ಎಂದು ಆರೋಪಿಸಿ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಮಾಹಿತಿ ಹರಿದಾಡಿತು.ಇದಾಗುತ್ತಿದ್ದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಸುರೇಶ್ ಕುಮಾರ್, ಉದಯ್ ಗರುಡಾಚಾರ್ ಹಾಗೂ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ ದಿಡೀರ್ ಪ್ರತಿಭಟನೆ ನಡೆಸಿದರು.
ಇದರಿಂದಾಗಿ ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ,ಅಘೋಷಿತ ಬಂದ್ ವಾತಾವರಣ ಸೃಷ್ಟಿಯಾಯಿತು ಈ ಪ್ರದೇಶದ ಸಾವಿರಾರು ಅಂಗಡಿ ಮುಂಗಟ್ಟುಗಳು ಮುಚ್ಚಿದವು.ಇದರಿಂದಾಗಿ ಆ ಪ್ರದೇಶದಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ನೂರಾರು ಕೋಟಿ ರೂಪಾಯಿ ವಹಿವಾಟು ನಿಂತುಹೋಯಿತು.
ಇದಷ್ಟೇ ಅಲ್ಲ ಮೊಬೈಲ್ ಅಂಗಡಿಯ ಮುಕೇಶ್ ಪೊಲೀಸರಿಗೆ ನೀಡಿರುವ ದೂರಿನ ಪ್ರತಿ ಲಭ್ಯವಾಗಿದೆ. ಅದರ ಪ್ರಕಾರ ಹನುಮಾನ್ ಚಾಲೀಸ್ ವಿಷಯ ಪ್ರಸ್ತಾಪವಾಗಿಲ್ಲ.ಬದಲಿಗೆ ಜೋರಾದ ಧ್ವನಿಯಲ್ಲಿ ಹಾಡು ಹಾಕಬಾರದು ಎಂದು ತಕರಾರು ಉಂಟಾಗಿದೆ ಎಂದು ಹೇಳಿ ದೂರಿನಲ್ಲಿ ಮೂವರು ಮುಸ್ಲಿಂ ಮತ್ತು ಇಬ್ಬರು ಹಿಂದೂ ಸಮುದಾಯದ ಹುಡುಗರ ಹೆಸರು ಉಲ್ಲೇಖಿಸಲಾಗಿದೆ. ಅಲ್ಲಿಗೆ ಇದೊಂದು ವಯಕ್ತಿಕ ಕಾರಣಕ್ಕೆ ನಡೆದ ಗಲಾಟೆಗೆ ರಾಜಕೀಯ ಸೇರಿ ಕೋಮುಬಣ್ಣ ಹಚ್ಚುವ ಪ್ರಯತ್ನ ಮಾಡಲಾಗಿದೆ ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.
1 Comment
i-tec.ru multimedijnyj-integrator.ru .